ತಿರುವನಂತಪುರಂ: ಕೇರಳದ ವಿವಿಧ ರೈಲು ನಿಲ್ದಾಣಗಳಿಂದ ಬಿಹಾರ ಮೂಲದ 5,700 ಕಾರ್ಮಿಕರನ್ನು ವಿಶೇಷ ರೈಲುಗಳ ಮೂಲಕ ತಮ್ಮ ರಾಜ್ಯಕ್ಕೆ ಕರೆದೊಯ್ಯಲಾಗಿದೆ.
ಕೇರಳ: ವಿಶೇಷ ರೈಲುಗಳ ಮೂಲಕ ಊರಿಗೆ ಮರಳಿದ ವಲಸೆ ಕಾರ್ಮಿಕರು - ಬಿಹಾರದ ಕಾರ್ಮಿಕರು
ಬಿಹಾರ ಮೂಲದ 5,700 ಕಾರ್ಮಿಕರನ್ನು, ಕೇರಳದ ವಿವಿಧ ರೈಲುಗಳ ಮೂಲಕ ತಮ್ಮ ರಾಜ್ಯಕ್ಕೆ ಕರೆದೊಯ್ಯಲಾಗಿದೆ. ಪ್ರಯಾಣಿಕರಿಗೆ ಮಾಸ್ಕ್, ಸ್ಯಾನಿಟೈಸರ್ ಮತ್ತು ಸಾಬೂನುಗಳನ್ನು ನೀಡಲಾಗಿದೆ.
train
ಎರ್ನಾಕುಲಂನಿಂದ ಬರುನಿ ಮತ್ತು ಮುಜಾಫರ್ಪುರಕ್ಕೆ ಎರಡು ರೈಲುಗಳು, ತ್ರಿಶ್ಶೂರ್ನಿಂದ ದರ್ಬಂಗಾಕ್ಕೆ ಒಂದು ರೈಲು, ಕೋಯಿಕ್ಕೋಡ್ನಿಂದ ಕಟಿಹಾರ್ಗೆ ಒಂದು ರೈಲು ಹಾಗೂ ಕಣ್ಣೂರಿನಿಂದ ಸಹರ್ಸಾಗೆ ಒಂದು ರೈಲು ಕೇರಳದಿಂದ ಹೊರಟಿವೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಪ್ರತಿ ರೈಲಿನಲ್ಲಿ ಕೇವಲ 1,140 ಪ್ರಯಾಣಿಕರನ್ನು ಕರೆದೊಯ್ಯಲಾದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆ. ಪ್ರಯಾಣಿಕರಿಗೆ ಮಾಸ್ಕ್, ಸ್ಯಾನಿಟೈಸರ್ ಮತ್ತು ಸಾಬೂನುಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
Last Updated : May 4, 2020, 8:38 AM IST