ಕೋಟಾ: ತಡರಾತ್ರಿ ಟ್ರಕ್ ಮತ್ತು ಬೊಲೆರೊ ಮಧ್ಯೆ ಡಿಕ್ಕಿ ಸಂಭವಿಸಿ ಐವರು ಸಾವನ್ನಪ್ಪಿರುವ ಘಟನೆ ದಿಗೋದ್ನಲ್ಲಿ ನಡೆದಿದೆ.
ಟ್ರಕ್-ಬೊಲೆರೊ ಮುಖಾಮುಖಿ ಡಿಕ್ಕಿ: ಭತ್ತ ಮಾರಾಟಕ್ಕೆ ಹೋದ ಐವರು ರೈತರು ಸಾವು - ಕೋಟಾ ರಸ್ತೆ ಅಪಘಾತ ಸುದ್ದಿ
10:51 December 04
ಟ್ರಕ್ ಮತ್ತು ಬೊಲೆರೊ ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಐವರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.
ಮಧ್ಯಪ್ರದೇಶದ ಮದನ್ಪುರ್ ಗ್ರಾಮದ 11 ಜನ ಭತ್ತ ಮಾರಾಟ ಮಾಡಲು ಬೊಲೆರೊದಲ್ಲಿ ಕೋಟಾಕ್ಕೆ ತೆರಳಿದ್ದರು. ಗುರುವಾರ ತಡರಾತ್ರಿ ಕೋಟಾದಿಂದ ಮದನ್ಪುರ್ಗೆ ವಾಪಸ್ ಬರುತ್ತಿದ್ದ ವೇಳೆ ಅವಘಡ ಸಂಭವಿಸಿದೆ.
ಟ್ರಕ್ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದ ಕೂಡಲೇ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದರು. ಏಳು ಜನರನ್ನು ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯದಲ್ಲಿ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆರು ಜನ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಘಟನೆ ಕುರಿತು ಕೋಟಾ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.