ಅಂಬಾಲ(ಹರಿಯಾಣ): ಅಂಬಾಲದ ಕೊಳಗೇರಿ ಪ್ರದೇಶದಲ್ಲಿ ಗೋಡೆ ಕುಸಿದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಐವರು ಸಾವಿಗೀಡಾಗಿದ್ದಾರೆ.
ಗೋಡೆ ಕುಸಿತ: ಮೂವರು ಮಕ್ಕಳು ಸೇರಿ ಐವರ ಸಾವು! - ಹರಿಯಾಣ
ಹರಿಯಾಣದಲ್ಲಿ ಗೋಡೆ ಕುಸಿದ ಪರಿಣಾಮ ಐವರು ಸಾವಿಗೀಡಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಬಹು ಹಂತದ ಪಾರ್ಕಿಂಗ್ ಕಟ್ಟಡ ನಿರ್ಮಾಣ ಕಾರ್ಯ ನಡೆಯತಿತ್ತು. ಸ್ಥಳದಲ್ಲಿ ಒಳಚರಂಡಿ ನಿರ್ಮಾಣ ಮಾಡಲಾಗುತಿತ್ತು, ಹೀಗಾಗಿ ಗೋಡೆ ತೇವಗೊಂಡಿದ್ದು, ಕುಸಿತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನೆ ನಡೆದ ರೀತಿ:
ರಾತ್ರಿ ವೇಳೆ ಕೊಳಗೇರಿಯ ಸುಮಾರು 12 ಮಂದಿ ಟಿವಿ ನೋಡುತ್ತಿದ್ದರು. ಈ ವೇಳೆ, ಕೇಬಲ್ ಸಮಸ್ಯೆ ಉಂಟಾದ ಪರಿಣಾಮ ವ್ಯಕ್ತಿಯೊಬ್ಬ ಮನೆ ಹತ್ತಿ ಕೇಬಲ್ ಸರಿಪಡಿಸಿ ಬಂದಿದ್ದಾನೆ. ಆತ ಮನೆ ಮೇಲಿಂದ ಕೆಳಗೆ ಇಳಿದ ಕೆಲ ಸಮಯದಲ್ಲೇ ಗೋಡೆ ಕುಸಿದಿದೆ. ಘಟನೆಯಲ್ಲಿ ಐವರು ಸಾವಿಗೀಡಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.