ಚಂಡೀಗಢ:ಲಾಕ್ಡೌನ್ ವೇಳೆ ವಾಹನದಲ್ಲಿ ಚಲಾಯಿಸುತ್ತಿದ್ದವರ ಬಳಿ ಪಾಸ್ ಕೇಳಿದ್ದಕ್ಕಾಗಿ ಎಎಸ್ಐ ಕೈ ಕತ್ತರಿಸಿ, ಮತ್ತಿಬ್ಬರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜೊತೆಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.
ಇಂದು ನಸುಕಿನ ಜಾವ ಚೆಕ್ಪೋಸ್ಟ್ ಬಳಿ ಎಎಸ್ಐ ಹರ್ಜೀತ್ ಸಿಂಗ್ ಸೇರಿದಂತೆ ಅನೇಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ವಾಹನದಲ್ಲಿ ಬಂದ ಐವರು ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಬ್ಯಾರಿಕೇಡ್ ಮುರಿದು ಪರಾರಿಯಾಗಿದ್ದರು. ಇವರೆಲ್ಲರೂ ಸಿಖ್ನ ನಿಹಂಗರು ಎಂದು ಗುರುತಿಸಲಾಗಿತ್ತು.