ಶ್ರೀನಗರ(ಜಮ್ಮು ಕಾಶ್ಮೀರ): ಭಯೋತ್ಪಾದಕರು ಹಾಗೂ ಸೇನೆಯ ನಡುವೆ ಎನ್ಕೌಂಟರ್ ನಡೆದಿದ್ದು, ಐವರು ಭಯೋತ್ಪಾದಕರನ್ನು ಸೇನೆ ಕೊಂದು ಹಾಕಿದೆ.
ಸೇನೆಯ ಗುಂಡೇಟಿಗೆ ಐವರು ಉಗ್ರರು ಫಿನಿಷ್: ನಾಲ್ಕು ದಿನದಲ್ಲಿ 14 ಮಂದಿ ಮಟಾಷ್ - ರಕ್ಷಣಾ ಪಡೆ
ಕಾಶ್ಮೀರದಲ್ಲಿ ಸೇನೆ ಹಾಗೂ ಉಗ್ರರ ನಡುವೆ ಎನ್ಕೌಂಟರ್ ನಡೆದಿದ್ದು, ಐವರು ಭಯೋತ್ಪಾದಕರನ್ನ ಸೇನೆ ಹತ್ಯೆ ಮಾಡಿದೆ.

ಕಾಶ್ಮೀರ ಎನ್ಕೌಂಟರ್
ಕಾಶ್ಮೀರ ಎನ್ಕೌಂಟರ್
ದಕ್ಷಿಣ ಕಾಶ್ಮೀರದ ಶೋಫಿಯಾನ್ ಜಿಲ್ಲೆಯ ಸುಗೂ ಎಂಬಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಸೇನೆಯಿಂದ ಜಂಟಿ ಕಾರ್ಯಾಚರಣೆ ನಡೆದಿದ್ದು, ಬೆಳಗ್ಗೆ 5.30ಕ್ಕೆ ಗುಂಡಿನ ಚಕಮಕಿ ಶುರುವಾಗಿತ್ತು. ಭಯೋತ್ಪಾದಕರನ್ನು ಶೋಧಿಸುವ ಕಾರ್ಯ ಮುಂದುವರೆಯುತ್ತಿದೆ ಎಂದು ಶ್ರೀನಗರದಲ್ಲಿರುವ ಸೇನೆಯ ಸಾರ್ವಜನಿಕರ ಸಂಪರ್ಕಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
Last Updated : Jun 10, 2020, 12:28 PM IST