ನರ್ಸಿಂಗ್ಪುರ(ಮಧ್ಯಪ್ರದೇಶ): ಹೈದರಾಬಾದ್ನಿಂದ ಉತ್ತರಪ್ರದೇಶಕ್ಕೆ ಟ್ರಕ್ನಲ್ಲಿ ತೆರಳುತ್ತಿದ್ದ ವೇಳೆ ಅದು ಪಲ್ಟಿಯಾದ ಪರಿಣಾಮ ಐವರು ವಲಸೆ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ನರ್ಸಿಂಗ್ಪುರ್ ಬಳಿ ನಡೆದಿದೆ.
ಟ್ರಕ್ ಪಲ್ಟಿ: ಐವರು ಕಾರ್ಮಿಕರು ಸಾವು, 11 ವಲಸೆ ಕಾರ್ಮಿಕರ ಸ್ಥಿತಿ ಗಂಭೀರ!
ಹೈದರಾಬಾದ್ನಿಂದ ಉತ್ತರಪ್ರದೇಶಕ್ಕೆ ಹೋಗುತ್ತಿದ್ದ ವೇಳೆ ಟ್ರಕ್ ಪಲ್ಟಿಯಾದ ಪರಿಣಾಮ ಐವರು ವಲಸೆ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ 11 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಇದರಲ್ಲಿ ಇಬ್ಬರು ಡ್ರೈವರ್ ಹಾಗೂ ಓರ್ವ ಕ್ಲೀನರ್ ಸೇರಿ ಒಟ್ಟು 20 ಮಂದಿ ಪ್ರಯಾಣ ಬೆಳೆಸುತ್ತಿದ್ದರು ಎಂದು ನರ್ಸಿಂಗ್ಪುರ್ ಜಿಲ್ಲಾಧಿಕಾರಿ ದೀಪಕ್ ಸಕ್ಸೆನಾ ಮಾಹಿತಿ ನೀಡಿದ್ದಾರೆ. ಗಾಯಗೊಂಡವರನ್ನ ವಿವಿಧ ಆಸ್ಪತ್ರೆಗಳಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಟ್ರಕ್ ಮಾವಿನ ಹಣ್ಣು ಹೊತ್ತು ಹೈದರಾಬಾದ್ನಿಂದ ಉತ್ತರಪ್ರದೇಶದ ಆಗ್ರಾಗೆ ತೆರಳುತ್ತಿತ್ತು. ವಲಸೆ ಕಾರ್ಮಿಕರು ಮಧ್ಯಪ್ರದೇಶದ ಝಾನ್ಸಿಗೆ ತೆರಳಿ ಅಲ್ಲಿಂದ ಮುಂದೆ ಪ್ರಯಾಣ ಬೆಳೆಸುವ ಯೋಜನೆ ಹಾಕಿಕೊಂಡಿದ್ದರು. ಆದರೆ ಟ್ರಕ್ ಪಲ್ಟಿಯಾಗಿ ಐವರು ನಡೆದು ದಾರಿಯಲ್ಲೇ ಪ್ರಾಣಬಿಟ್ಟಿದ್ದಾರೆ. ಮೊನ್ನೆ ಕೂಡ ಮಹಾರಾಷ್ಟ್ರದಿಂದ ತೆರಳುತ್ತಿದ್ದ 16 ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಅದರ ಬೆನ್ನಲ್ಲೇ ಮತ್ತೊಂದು ವಲಸೆ ಕಾರ್ಮಿಕರ ದುರ್ಘಟನೆ ನಡೆದಿದೆ.