ನವದೆಹಲಿ:ರಿಕ್ಷಾ ಚಾಲಕ ಮತ್ತು ಆತನ ಪತ್ನಿ ಸೇರಿದಂತೆ ಮೂವರು ಮಕ್ಕಳ ಮೃತ ದೇಹಗಳು ಕೊಳೆತ ಸ್ಥಿತಿಯಲ್ಲಿ ದೊರೆತಿರುವ ಘಟನೆ ಭಜನ್ಪುರ್ನಲ್ಲಿ ನಡೆದಿದೆ.
ಮೃತರನ್ನು ಶಂಭುನಾಥ್ (45) ಹಾಗೂ ಪತ್ನಿ ಸುನೀತಾ (38), ಮಗಳು ಶಿವಂ (17), ಗಂಡು ಮಕ್ಕಳಾದ ಸಚಿನ್ (14) ಮತ್ತು 12 ವರ್ಷದ ಕೋಮಲ್ ಎಂದು ಗುರುತಿಸಲಾಗಿದೆ. ಇವರು ವಾಸಿಸುತ್ತಿದ್ದ ಮನೆಗೆ ಹೊರಗಡೆಯಿಂದ ಬೀಗ ಹಾಕಲಾಗಿದೆ. ಕಳೆದ ಆರು ದಿನಗಳ ಹಿಂದೆ ಈ ಕುಟುಂಬ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.