ನವದೆಹಲಿ: ಹಲೋಪತಿ ಔಷಧಿಯನ್ನು ಆಯುಷ್‌ನೊಂದಿಗೆ ಸಂಯೋಜಿಸುವ ಸರ್ಕಾರದ ಕ್ರಮವನ್ನು ವಿರೋಧಿಸುವ ಸಂಕೇತವಾಗಿ ದೇಶಾದ್ಯಂತ ಅಲೋಪತಿ ಔಷಧವನ್ನು ಅಭ್ಯಾಸ ಮಾಡುವ ಸುಮಾರು 5 ಲಕ್ಷ ವೈದ್ಯರು ತಮ್ಮ ಸೇವೆಗಳನ್ನು ನೀಡದಿರಲು ನಿರ್ಧರಿಸಿದ್ದಾರೆ.
'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಡಾ.ಆರ್.ವಿ. ಅಶೋಕನ್ ನವದೆಹಲಿಯಲ್ಲಿ ಸೋಮವಾರ ನಡೆದ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಯ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಐಎಂಎ ಪ್ರಧಾನ ಕಾರ್ಯದರ್ಶಿ ಡಾ. ಆರ್.ವಿ. ಅಶೋಕನ್ ತಿಳಿಸಿದ್ದಾರೆ.
ಅಲೋಪತಿ ಔಷಧಿಯನ್ನು ಆಯುಷ್‌ನೊಂದಿಗೆ ಸಂಯೋಜಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಐಎಂಎ ತೀವ್ರ ವಿರೋಧ ವ್ಯಕ್ತಪಡಿಸಿದೆ. ಐಎಂಎಯಲ್ಲಿ 3.25 ಲಕ್ಷ ಸದಸ್ಯರನ್ನು ಹೊಂದಿದ್ದೇವೆ. ಆದರೆ ಸರ್ಕಾರದ ಈ ಕ್ರಮವು ಆಧುನಿಕ ಔಷಧದ ಎಲ್ಲಾ 9 ಲಕ್ಷ ವೈದ್ಯರ ಮೇಲೆ ಪರಿಣಾಮ ಬೀರಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಜೂನಿಯರ್ ಡಾಕ್ಟರ್ಸ್ ಗಳಿಗೆ ಹೆಚ್ಚಿನ ಹೊಡೆತ ಬೀಳಲಿದೆ ಎಂದು ಅವರು ಹೇಳಿದರು. ಹೀಗಾಗಿ ಆಧುನಿಕ ಮೆಡಿಸಿನ್ ಅಭ್ಯಸಿಸಿರುವ ವೈದ್ಯರು ಸರ್ಕಾರದ ಕ್ರಮವನ್ನು ವಿರೋಧಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಾರೆ ಎಂದು ಡಾ. ಅಶೋಕನ್ ಹೇಳಿದರು.
ಐಎಂಐ ಆಧುನಿಕ ಔಷಧದ ಮೇಲಿನ ಅಧಿಕಾರ ವ್ಯಾಪ್ತಿಯನ್ನು ಉಲ್ಲಂಘಿಸಿದ್ದಕ್ಕಾಗಿ, ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ (ಸಿಸಿಐಎಂ) ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಕುರಿತು ಯೋಚಿಸುತ್ತಿರುವುದಾಗಿ ಅವರು ತಿಳಿಸಿದ್ರು.
"ನಾವು ಈ 'ಮಿಕ್ಸೋಪತಿ'ಗೆ(ಎಲ್ಲಾ ರೀತಿಯ ಔಷಧಿಗಳನ್ನು ಒಟ್ಟಿಗೆ ಸಂಯೋಜಿಸುವುದು) ವಿರುದ್ಧವಾಗಿದ್ದೇವೆ. ಇದನ್ನು ಐಎಂಎ ಮತ್ತು ಆಧುನಿಕ ವೈದ್ಯಕೀಯ ವೈದ್ಯರು ಒಪ್ಪಿಕೊಳ್ಳುವುದಿಲ್ಲ ಎಂದು ಡಾ. ಅಶೋಕನ್ ಸ್ಪಷ್ಟಪಡಿಸಿದ್ರು. ಇಲ್ಲಿ ಸಾರ್ವಜನಿಕ ಹಿತಾಸಕ್ತಿ , ಆರೋಗ್ಯ ಮತ್ತು ಸುರಕ್ಷತೆ ಪರಿಗಣಿಸಲ್ಪಡುತ್ತೆ ಎಂದರು.