ಜಮ್ಮುಕಾಶ್ಮೀರ:ಮನೆಯೊಂದರ ಮೇಲೆ ಬಂಡೆ ಉರುಳಿ ಬಿದ್ದು ನಾಲ್ವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ಘಟನೆ ಉಧಂಪುರ ಜಿಲ್ಲೆಯಲ್ಲಿ ನಡೆದಿದೆ.
ಯಮನಂತೆ ಬಂದು ನಿದ್ರಿಸುತ್ತಿದ್ದ ಒಂದೇ ಕುಟುಂಬದ ಐವರನ್ನು ಬಲಿ ಪಡೆದ ಬಂಡೆ ಕಲ್ಲು - ಮನೆ ಮೇಲೆ ಉರುಳಿ ಬಿದ್ದ ಬಂಡೆ
ಮನೆಯೊಂದರ ಮೇಲೆ ಬಂಡೆ ಉರುಳಿ ಬಿದ್ದು ನಾಲ್ವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದು, ಇನ್ನೊಬ್ಬ ವ್ಯಕ್ತಿಗೆ ಗಾಯವಾಗಿರುವ ಘಟನೆ ಜಮ್ಮು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ನಡೆದಿದೆ.

ಉಧಂಪುರ ಜಿಲ್ಲೆಯ ರಾಮನಗರದ ಬರ್ಮೀನ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತರನ್ನು ಶಾರದಾ ದೇವಿ (35), ಆರತಿ ದೇವಿ (16), ಅನು ದೇವಿ (14), ಸ್ವಾನಿ ದೇವಿ (12) ಹಾಗೂ ಪವನ್ ಸಿಂಗ್ (10) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ರಾಜ್ ಸಿಂಗ್ ಎಂಬ ವ್ಯಕ್ತಿ ಕೂಡ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಮುಂಜಾನೆ 11.30ರ ವೇಳೆ, ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಘಟನೆ ನಡೆದಿದ್ದು, ಪೊಲೀಸರು ಹಾಗೂ ಸ್ಥಳೀಯರ ಸಹಾಯದಿಂದ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ಸಾವಿಗೆ ತೀವ್ರ ಸಂತಾಪ ಸೂಚಿಸಿರುವ ಉಧಂಪುರ ಜಿಲ್ಲಾಧಿಕಾರಿ ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.