ಕರ್ನಾಟಕ

karnataka

ETV Bharat / bharat

ಹಳ್ಳಕ್ಕೆ ಬಿದ್ದ ಕಾರು: ಇಬ್ಬರು ಸಾವು, ಮೂವರ ರಕ್ಷಣೆ - Five Family member Stucked in water in unjha

ಕಾರೊಂದು ಪಲ್ಟಿಯಾಗಿ ಹಳ್ಳಕ್ಕೆ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಗುಜರಾತ್​ನ ಮೆಹಸಾನ್​ ಜಿಲ್ಲೆಯಲ್ಲಿ ನಡೆದಿದೆ.

ಹಳ್ಳಕ್ಕೆ ಬಿದ್ದ ಕಾರು
ಹಳ್ಳಕ್ಕೆ ಬಿದ್ದ ಕಾರು

By

Published : Aug 24, 2020, 4:46 PM IST

ಗುಜರಾತ್​:ಚಲಿಸುತ್ತಿದ್ದ ಕಾರೊಂದು ಪಲ್ಟಿಯಾಗಿ ಹಳ್ಳಕ್ಕೆ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಮೆಹಸಾನ್​ ಜಿಲ್ಲೆಯ ಉನ್ಜಾ ತಾಲೂಕಿನ ವರವಾಡ ಗ್ರಾಮದ ಬಳಿ ಸಂಭವಿಸಿದೆ.

ಹಳ್ಳಕ್ಕೆ ಬಿದ್ದಿರುವ ಕಾರನ್ನು ಮೇಲಕ್ಕೆ ಎತ್ತುತ್ತಿರುವ ಜನ

ಖೇರಾಲುವಿನ ಪಾಂಡ್ಯ ಕುಟುಂಬದ ಸದಸ್ಯರು ಕಾರಿನಲ್ಲಿ ಬರುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರು ಇದ್ದರು. ಬಳಿಕ ಸ್ಥಳೀಯರು ಕಾರನ್ನು ನೀರಿನಿಂದ ಹೊರತೆಗೆದಿದ್ದಾರೆ.

ಆದ್ರೆ, ಅಷ್ಟರಲ್ಲಿ ಕಾರಿನಲ್ಲಿದ್ದ ತಂದೆ ಮತ್ತು ಮಗ ಸಾವನ್ನಪ್ಪಿದ್ದಾರೆ. ಮೂವರು ಮಹಿಳೆಯರನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ABOUT THE AUTHOR

...view details