ಕರ್ನಾಟಕ

karnataka

ETV Bharat / bharat

ರಸ್ತೆ ಅಪಘಾತ: ಒಂದೇ ಕುಟುಂಬದ ಐವರ ದುರ್ಮರಣ - ಭೀರಕ ರಸ್ತೆ ಅಪಘಾತ

ಬಿಹಾರ ರಾಜ್ಯದ ಮಧುಬನಿ ಎಂಬಲ್ಲಿ ಟ್ರಕ್​ ಮತ್ತು ಬೊಲೆರೋ ವಾಹನಗಳ ಮಧ್ಯೆ ನಡೆದ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ಜಯನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

five-died-in-road-accident-in-madhubani
ಬಿಹಾರದಲ್ಲಿ ರಸ್ತೆ ಅಪಘಾತ

By

Published : Jan 9, 2020, 8:10 AM IST

ಮಧುಬನಿ (ಬಿಹಾರ): ಟ್ರಕ್ ಹಾಗೂ ಬೊಲೆರೋ ವಾಹನ ಅಪಘಾತದಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಬಿಹಾರದಲ್ಲಿ ರಸ್ತೆ ಅಪಘಾತ

ಬಿಹಾರ ರಾಜ್ಯದ ಮಧುಬನಿ ಜಿಲ್ಲೆಯ ಜಯನಗರದ ಡಿಬಿ ಕಾಲೇಜಿನ ಬಳಿ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಹತ್ತಿರದ ದರ್ಬಾಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೊಲೆರೋದಲ್ಲಿದ್ದ ಮೃತರು ಗಿಡಮೂಲಿಕೆಗಳ ವ್ಯಾಪರಸ್ಥರಾಗಿದ್ದರು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ ನೀಡಿದ್ದು, ಸ್ಥಳೀಯರ ಸಹಾಯದಿಂದ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಐವರನ್ನ ಕಳೆದುಕೊಂಡ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

ABOUT THE AUTHOR

...view details