ದೋಡಾ: ಪರಿಸರ ಸ್ನೇಹಿ ಕಾರೊಂದು ಆಳವಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಐವರು ಮೃತಪಟ್ಟಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ರಗ್ಗಿ ನಲ್ಲಾ ಪ್ರದೇಶದಲ್ಲಿ ನಡೆದಿದೆ.
ಕಂದಕಕ್ಕೆ ಉರುಳಿದ ಕಾರು: ಸ್ಥಳದಲ್ಲೇ ಐವರ ದುರ್ಮರಣ - ದೋಡಾ ಜಿಲ್ಲೆ
ಜಮ್ಮು ಮತ್ತು ಕಾಶ್ಮೀರದ ರಂಬನ್ನಿಂದ ದೋಡಾಗೆ ಹೋಗುತ್ತಿದ್ದ ಪರಿಸರ ಸ್ನೇಹಿ ಕಾರೊಂದು ಆಳವಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಐವರು ಮೃತಪಟ್ಟಿದ್ದಾರೆ.
ಅಪಘಾತ
ಇಂದು ಬೆಳಗ್ಗೆ ರಂಬನ್ನಿಂದ ದೋಡಾಗೆ ಕಾರು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಾರಿನ ನೋಂದಣಿ ಸಂಖ್ಯೆ JK019-6674 ಆಗಿದೆ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.