ಮಹಾರಾಷ್ಟ್ರ/ಸಾಂಗ್ಲಿ: ಸಂಬಂಧಿಕರ ಅಂತ್ಯಕ್ರಿಯೆಗೆ ತೆರಳುತ್ತಿರುವ ಸಂದರ್ಭದಲ್ಲಿ, ರಸ್ತೆಯ ಬದಿಯಲ್ಲಿದ್ದ ಆಳವಾದ ಬಾವಿಗೆ ವ್ಯಾಗನಾರ್ ಕಾರು ಬಿದ್ದು 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ.
ಬಾವಿಗೆ ಬಿದ್ದ ವ್ಯಾಗನಾರ್ ಕಾರು: ಐವರ ಸಾವು, ಓರ್ವನಿಗೆ ಗಂಭೀರ ಗಾಯ - maharashtra car accident news
ಅಂತ್ಯಕ್ರಿಯೆಗೆ ತೆರಳುತ್ತಿರುವ ಸಂದರ್ಭದಲ್ಲಿ, ರಸ್ತೆಯ ಬದಿಯಲ್ಲಿದ್ದ ಆಳವಾದ ಬಾವಿಗೆ ವ್ಯಾಗನಾರ್ ಕಾರು ಬಿದ್ದು 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಅಟ್ಪಾಡಿ ತಾಲೂಕಿನ ಜರೆ-ಪರೇಕರ್ವಾಡಿಯ ಆರು ಮಂದಿ ತಮ್ಮ ಸಂಬಂಧಿಕರ ಅಂತ್ಯಕ್ರಿಯೆಗಾಗಿ ಚಿತ್ರಾಲ್‌ಗೆ ತೆರಳುತ್ತಿರುವ ವೇಳೆ, ಕಾರಿನ ಚಾಲಕನಿಗೆ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯಲ್ಲಿದ್ದ ಬಾವಿಗೆ ಬಿದ್ದಿದೆ. ಇನ್ನು ಬಾವಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಇದ್ದುದರಿಂದ ಮೇಲೆ ಬರಲು ಸಾಧ್ಯವಾಗದೇ ಕಾರಿನಲ್ಲಿದ್ದವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮಚ್ಚಿಂದ್ರಾ ಪಾಟೀಲ್ (60), ಕುಂಡಲಿಕ್ ಬಾರ್ಕಡೆ (60), ಗುಂಡಾ ಡೊಂಬಲೆ (35), ಸಂಗೀತ ಪಾಟೀಲ್ (40), ಶೋಭಾ ಪಾಟೀಲ್ (38) ಮೃತಪಟ್ಟವರಾಗಿದ್ದಾರೆ. ಇನ್ನು ಕಾರಿನಲ್ಲಿದ್ದ ಇನ್ನೊಬ್ಬ ವ್ಯಕ್ತಿ ಹರಿಬಾ ವಾಘಮರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಈ ಘಟನೆ ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ. ನಂತರ ವಿಷಯ ತಿಳಿದ ಸ್ಥಳೀಯರು ಜೆಸಿಬಿಯ ಮೂಲಕ ವ್ಯಾಗನಾರ್ ಕಾರನ್ನು ಹೊರತೆಗೆಯಲು ಸಹಕರಿಸಿದ್ದಾರೆ.