ಕರ್ನಾಟಕ

karnataka

ETV Bharat / bharat

ಬ್ಯಾಂಕ್‌ನಿಂದ 7 ಲಕ್ಷ ರೂಪಾಯಿ ದೋಚಿದ ಐವರು ಖದೀಮರು - ಹರಿಯಾಣದ ಝಜ್ಜರ್

ಐವರು ಶಸ್ತ್ರಸಜ್ಜಿತ ವ್ಯಕ್ತಿಗಳು ಝಜ್ಜರ್ ಜಿಲ್ಲೆಯ ಮಚ್ರೌಲಿ ಗ್ರಾಮದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ಸುಮಾರು 7 ಲಕ್ಷ ರೂ ಹಣ ಲೂಟಿ ಮಾಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

Five armed men loot over Rs 7 lakhs from bank in Haryana
ಹರಿಯಾಣದ ಬ್ಯಾಂಕಿನಿಂದ 7 ಲಕ್ಷ ರೂಪಾಯಿ ದೋಚಿದ ಐವರು ಖದೀಮರು

By

Published : Oct 22, 2020, 9:40 AM IST

ಝಜ್ಜರ್(ಹರಿಯಾಣ):ಐವರು ಶಸ್ತ್ರಸಜ್ಜಿತ ವ್ಯಕ್ತಿಗಳು ಝಜ್ಜರ್ ಜಿಲ್ಲೆಯ ಮಚ್ರೌಲಿ ಗ್ರಾಮದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನೊಳಗೆ ನುಗ್ಗಿ ಸುಮಾರು 7 ಲಕ್ಷ ರೂ ಹಣ ಲೂಟಿ ಮಾಡಿದ್ದಾರೆ.

ದುಷ್ಕರ್ಮಿಗಳು ಬ್ಯಾಂಕಿನಿಂದ ಹಣ ಲೂಟಿ ಮಾಡುವಾಗ ಮುಖಕ್ಕೆ ಮುಖವಾಡ ಧರಿಸಿ, ಕೈಯಲ್ಲಿ ಬಂದೂಕು ಹಿಡಿದಿದ್ದರು. ಇವರು ಬ್ಯಾಂಕ್‌ನೊಳಗೆ ನುಗ್ಗುತ್ತಿದ್ದಂತೆ ಬ್ಯಾಂಕಿನ ಭದ್ರತಾ ಸಿಬ್ಬಂದಿಯ ಬಂದೂಕನ್ನು ಕಿತ್ತುಕೊಂಡಿದ್ದರು.

ಕೃತ್ಯದ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಕುರಿತು ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಹಿಮಾಂಶು ಗರ್ಗ್, "ನಮ್ಮಲ್ಲಿ ಕೃತ್ಯದ ಸಿಸಿಟಿವಿ ದೃಶ್ಯಾವಳಿಗಳಿವೆ. ಈ ಬಗ್ಗೆ ವಿವರವಾದ ತನಿಖೆ ನಡೆಸುತ್ತಿದ್ದೇವೆ. ಸುಮಾರು 7 ಲಕ್ಷ ರೂ. ಲೂಟಿ ಮಾಡಲಾಗಿದೆ. ಎರಡು ಡಿಎಸ್​ಪಿ ಶ್ರೇಣಿಯ ಅಧಿಕಾರಿಗಳು ಪ್ರಕರಣದ ತನಿಖೆ ಮಾಡಲಿದ್ದಾರೆ. ಜೊತೆಗೆ ನಾನೂ ಕೂಡ ಈ ವಿಷಯವನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ" ಎಂದರು.

ABOUT THE AUTHOR

...view details