ಕರ್ನಾಟಕ

karnataka

ETV Bharat / bharat

ಮೈದಾನದಲ್ಲಿ ವಿರಾಟ್​ ರೂಪ ತಾಳುವ ಕೊಹ್ಲಿಗೆ ಸುಸ್ತಾಗುತ್ತಾ?:  ಮೋದಿ ಪ್ರಶ್ನೆ

'ಫಿಟ್​ ಇಂಡಿಯಾ ಅಭಿಯಾನ' ಒಂದು ವರ್ಷ ಪೂರೈಸಿರುವ ಹಿನ್ನೆಲೆ ಫಿಟ್ನೆಸ್​​ ಸ್ಫೂರ್ತಿಯಾಗಿರುವ ಮತ್ತು ಸಮಾಜದಲ್ಲಿ ಆದರ್ಶಪ್ರಾಯರಾಗಿರುವ ಐಕಾನ್​​ಗಳ ಜೊತೆ ಇಂದು ಪ್ರಧಾನಿ ಮೋದಿ ಆನ್​​ಲೈನ್ ಸಂವಾದ ನಡೆಸಿದರು.

Fit India dialogue 2020
Fit India dialogue 2020

By

Published : Sep 24, 2020, 3:37 PM IST

ಹೈದರಾಬಾದ್​:ಫಿಟ್​ ಇಂಡಿಯಾ ಅಂಭಿಯಾನ ಒಂದು ವರ್ಷ ಪೂರೈಕೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗಿಯಾಗಿ ಅನೇಕ ದಿಗ್ಗಜರೊಂದಿಗೆ ಸಂವಾದ ನಡೆಸಿದರು.

ಫಿಟ್​ ಇಂಡಿಯಾ 2020

ಬೆಳಗ್ಗೆ 12 ಗಂಟೆಗೆ ಆರಂಭಗೊಂಡ ಸಂವಾದದಲ್ಲಿ ಪ್ರಮುಖವಾಗಿ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ, ಮಿಲಿಂದ್​​ ಸೋಮನ್​, ರುಜುತಾ ದಿವೇಕರ್​, ಸ್ವಾಮಿ ಶಿವಾಧ್ಯಾನಂ ಸರಸ್ವತಿ ಸೇರಿ ಅನೇಕರು ಭಾಗಿಯಾಗಿದ್ದರು. ಈ ವೇಳೆ, ಪ್ರಧಾನಿ ನರೇಂದ್ರ ಮೋದಿ ತಮ್ಮ ಫಿಟ್ನೆಸ್​​​ ಸಿಕ್ರೆಟ್​ ಹಂಚಿಕೊಂಡರು.

ಇದೇ ವೇಳೆ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಜತೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಿಮಗೆ ಸುಸ್ತಾಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿದ ವಿರಾಟ್​, ಪ್ರತಿಯೊಬ್ಬರೂ ತಮಗೆ ಧಣಿವಾಗಿದೆ ಎಂದು ಅಂದುಕೊಳ್ಳುತ್ತಾರೆ. ಆದರೆ, ನಮ್ಮ ಜೀವನ ಶೈಲಿ ಉತ್ತಮವಾಗಿದ್ದರೆ ಮತ್ತು ನಾವು ನಿತ್ಯ ಕೆಲಸ ಮಾಡುತ್ತಿದ್ದರೆ, ಉತ್ಸಾಹದಿಂದ ಇರುತ್ತೇವೆ. ಇವೆಲ್ಲವೂ ವ್ಯಕ್ತಿಯ ಜೀವನಶೈಲಿ ಮೇಲೆ ಅವಲಂಬಿತವಾಗಿರುತ್ತವೆ ಎಂದಿದ್ದಾರೆ.

ವಿವಿಧ ಐಕಾನ್​ಗಳ ಜತೆ ನಮೋ ಸಂವಾದ

ತಮ್ಮ ಫಿಟ್ನೆಸ್​​​ ರಹಸ್ಯ ಹಂಚಿಕೊಂಡ ಕೊಹ್ಲಿ, ನಮ್ಮ ಉದ್ದೇಶಗಳು ಸರಿಯಾಗಿರಬೇಕು. ಅದರ ಪ್ರಕಾರವೇ ನಮ್ಮಿಂದ ಫಲಿತಾಂಶ ಹೊರಬರುತ್ತವೆ ಎಂದು ತಿಳಿಸಿದ್ದಾರೆ. ಇಂಡಿಯನ್​ ಪ್ರೀಮಿಯರ್​ ಲೀಗ್​ನ 13ನೇ ಆವೃತ್ತಿಯಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಮುನ್ನಡೆಸುತ್ತಿರುವ 31 ವರ್ಷದ ಕ್ರಿಕೆಟಿಗ ಕೊಹ್ಲಿ, ತಮ್ಮ ಕ್ರಿಕೆಟ್​​ನಲ್ಲಿ ನಡೆಸುವ ಯೋ-ಯೋ ಪರೀಕ್ಷೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಫಿಟ್ನೆಸ್​​​​ ವಿಷಯದಲ್ಲಿ ಇದು ಬಹಳ ಮುಖ್ಯವಾದ ಪರೀಕ್ಷೆ. ಇತರ ತಂಡಗಳಿಗೆ ಹೋಲಿಕೆ ಮಾಡಿದಾಗ ನಮ್ಮ ಫಿಟ್ನೆಸ್​​​ ಮಟ್ಟ ಕಡಿಮೆಯಾಗಿದೆ. ಯೋ-ಯೋ ಪರೀಕ್ಷೆ ನೀಡಿದ ಮೊದಲ ವ್ಯಕ್ತಿ ನಾನು. ಇದರಲ್ಲಿ ವಿಫಲವಾದರೆ ಆಯ್ಕೆ ಮಾಡಲು ಕೂಡ ಆಗಲ್ಲ. ಟೆಸ್ಟ್​ ಪಂದ್ಯದ ವೇಳೆ ಆಟಗಾರರು 4ರಿಂದ 5 ದಿನ ಮೈದಾನದಲ್ಲಿರಬೇಕಾಗುತ್ತದೆ. ಈ ವೇಳೆ ನಮಗೆ ಫಿಟ್ನೆಸ್​​​​​ ಮಟ್ಟ ಉತ್ತಮವಾಗಿರಬೇಕು ಎಂದು ಕೊಹ್ಲಿ ಹೇಳಿದ್ದಾರೆ.

ಇದೇ ವೇಳೆ ವಿರಾಟ್​​ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರ ಆರೋಗ್ಯ ಉತ್ತಮವಾಗಿರಲಿ ಎಂದು ನಮೋ ಹಾರೈಸಿದರು. ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಜತೆಗೆ ಐಪಿಎಲ್​ ವೇಳಾಪಟ್ಟಿ ಬಿಡುವಿಲ್ಲದ ಸಮಯದಲ್ಲೂ ಮಾತನಾಡಲು ಸಮಯ ತೆಗೆದುಕೊಂಡಿದ್ದಕ್ಕಾಗಿ ವಿರಾಟ್​​ಗೆ ಮೋದಿ ಧನ್ಯವಾದ ಅರ್ಪಿಸಿದ್ದಾರೆ.

ಯಾವುದೇ ವ್ಯಕ್ತಿ ತನ್ನ ದೇಹ ಸದೃಢವಾಗಿಟ್ಟುಕೊಳ್ಳುವುದು ಅತಿ ಮುಖ್ಯ. ಆರೋಗ್ಯವನ್ನ ಕೆಡಿಸಿಕೊಳ್ಳಬೇಡಿ. ಆದರೆ ತೂಕವನ್ನ ಕಡಿಮೆ ಮಾಡಿಕೊಳ್ಳಿ ಎಂದು ಪ್ರಧಾನಿ ಮನವಿ ಮಾಡಿದ್ದಾರೆ.

ABOUT THE AUTHOR

...view details