ಕರ್ನಾಟಕ

karnataka

By

Published : Oct 31, 2019, 7:06 PM IST

ETV Bharat / bharat

ತತ್ತರಿಸಿದ ಮತ್ಸ್ಯೋದ್ಯಮಕ್ಕೆ ಬೆಚ್ಚಿದ ಆರ್ಥಿಕತೆ: ಮೀನು ಕೃಷಿಗೆ ಬೇಕಿದೆ ಸರ್ಕಾರದ ಪ್ರೋತ್ಸಾಹ

ಸರ್ಕಾರದ ಆರ್ಥಿಕತೆಯನ್ನು ಭದ್ರಪಡಿಸುವಲ್ಲಿ ಮತ್ಸ್ಯೋದ್ಯಮದ ಪಾತ್ರವೂ ಹಿರಿದು. ಈ ಕ್ಷೇತ್ರ ಸದ್ಯ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು ಉತ್ಪಾದನೆ ಕುಸಿಯುತ್ತಿದೆ. ಕಾರಣ ಮೀನು ಕೃಷಿ ನಷ್ಟಕ್ಕೆ ಸಿಲುಕಿದೆ. ಹೀಗಾಗಿ ಈ ಉದ್ಯಮದಲ್ಲಿ ಚೇತರಿಕೆ ಕಾಣಲು ಸರ್ಕಾರ ಅಗತ್ಯ ಸಹಕಾರ ನೀಡಬೇಕಿದೆ.

Fisheries situation its very bad present

ಕೆಲವು ದಶಕಗಳಿಂದ ಭಾರತದ ಮೀನುಗಾರಿಕಾ ಉದ್ಯಮ ಸ್ಥಿರ ಪ್ರಗತಿಯತ್ತ ಸಾಗಿದೆ. ದೇಶದಲ್ಲಿ ಹೆದ್ದಾರಿಗಳನ್ನು ನಿರ್ಮಿಸುವ ಮೊದಲೇ ಸಿಹಿ ಮತ್ಸ್ಯೋದ್ಯಮ ಪ್ರಾರಂಭವಾಗಿತ್ತು. ರೈತರು, ಉದ್ಯಮಿಗಳು, ಮೊದಲ ಹಂತದ ಮೀನುಗಾರಿಕಾ ವಿಜ್ಞಾನಿಗಳ ಮತ್ತು ಸರ್ಕಾರದ ಪ್ರೋತ್ಸಾಹದಿಂದ ನೀಲಿಕ್ರಾಂತಿ ಪ್ರಗತಿ ಕಂಡಿತು. ದೇಶದ ಅತಿದೊಡ್ಡ ಸಿಹಿನೀರಿನ ಮೀನು ಸಾಕಾಣಿಕೆ ಉದ್ಯಮ ಕೊಲ್ಲೇರು ನದಿ ಜಲಾನಯನ. ಕೃಷಿ ಮತ್ತು ಸಂಬಂಧಿಸಿದ ಕೈಗಾರಿಕೆಗಳಿಗೆ ಹೋಲಿಸಿ ನೋಡಿದರೆ, ಪ್ರತಿ ಹೆಕ್ಟೇರ್​ಗೆ 25 ಇಪ್ಪತೈದು ಮಂದಿ ಕೆಲಸ ಮಾಡುವ ಉದ್ಯಮಮತ್ಸ್ಯೋದ್ಯಮ. ಈ ಉದ್ಯಮವು ಪ್ರವರ್ಧಮಾನಕ್ಕೆ ಬರುತ್ತಿದ್ದರೂ ಉತ್ತಮ ದರ, ಮಂಜುಗಡ್ಡೆ ಕೊರತೆ ಮತ್ತು ಸಾಕಷ್ಟು ಶೈತ್ಯಾಗಾರಗಳು ಇಲ್ಲದಿರುವಂತಹ ಸಮಸ್ಯೆಗಳು ಈ ಉದ್ಯಮವನ್ನು ಕಾಡುತ್ತಿವೆ. ಈ ನ್ಯೂನತೆಗಳಿಂದ ಒಟ್ಟಾರೆ ಉತ್ಪನ್ನದಲ್ಲಿ ಶೇ.10ರಷ್ಟು ನಷ್ಟ ಅನುಭವಿಸುತ್ತಿದೆ.

ಗುಣಮಟ್ಟದ ಮೀನು ಮರಿ (ಬೀಜಗಳು) ಮತ್ತು ಸಿಗಡಿ ಕೃಷಿ ಅತ್ಯಂತ ಮಹತ್ವ ಹೊಂದಿವೆ. ಈ ವಿಷಯದಲ್ಲಿ ಮೀನು ಬೀಜ ಅಭಿವೃದ್ಧಿ ಮತ್ತು ಪ್ರಮಾಣೀಕರಣಕ್ಕಾಗಿ ಹಲವಾರು ಮಾರ್ಗಸೂಚಿ ರೂಪಿಸಲಾಗಿದ್ದರೂ, ಅವುಗಳ ಅನುಷ್ಠಾನ ಮಾತ್ರ ನೀರಸವಾಗಿದೆ. ಮೀನುಗಾರಿಕಾ ಇಲಾಖೆ ಮಾರ್ಗದರ್ಶನದಲ್ಲಿ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ಮೀನು ಫ್ರೈ (ಮರಿಗಳು) ಉತ್ಪಾದನಾ ಕೇಂದ್ರ ಸ್ಥಾಪಿಸಲಾಗಿತ್ತು. ಈ ಕೇಂದ್ರ ಗಳಿಸಿದ ಲಾಭದಿಂದ ಇಡೀ ಇಲಾಖೆಗೆ ವೇತನ ನೀಡಲಾಯಿತು ಎನ್ನಲಾಗುತ್ತದೆ. ಅಲ್ಲದೆ, ಖಾಸಗಿ ಉದ್ಯಮಿಗಳ ಪ್ರವೇಶದೊಂದಿಗೆ ಇಲ್ಲಿನ ವ್ಯವಹಾರ ಪಶ್ಚಿಮಬಂಗಾಳವನ್ನೂ ಮೀರಿಸಿದೆ. ಕರ್ನಾಟಕ ಸರ್ಕಾರ ಮತ್ತು ಮೀನುಗಾರಿಕಾ ಇಲಾಖೆ ಜಂಟಿಯಾಗಿ ನಡೆಸುತ್ತಿರುವ ತುಂಗಭದ್ರಾ ಜಲಾನಯನ ಪ್ರದೇಶದ ಮೀನು ಕೃಷಿ ಕೇಂದ್ರದಲ್ಲಿ ಗುಣಮಟ್ಟದ ಬೀಜ ಉತ್ಪಾದಿಸಲಾಗುತ್ತದೆ. ರಾಜ್ಯದ ಕೇಂದ್ರದಲ್ಲಿ ಒಂದು ಲಕ್ಷ ಮೊಟ್ಟೆಗಳ ಬೆಲೆ ₹ 1,000 ಆಗಿದ್ದರೆ, ಆಂಧ್ರಪ್ರದೇಶ ಕೇಂದ್ರದಲ್ಲಿ ₹ 200ಕ್ಕೆ ಮಾರಾಟ ಮಾಡುತ್ತಿದೆ. ಕೇವಲ ತುಂಗಾಭದ್ರ ಕೇಂದ್ರದಿಂದ ಕರ್ನಾಟಕ ₹ 40 ಲಕ್ಷ ಆದಾಯ ಗಳಿಸುತ್ತಿದೆ.

ಪ್ರಸ್ತುತ ಎರಡು ಕಡೆ ಮಾತ್ರ ಮೀನುಗಳನ್ನು ಹೆಚ್ಚು ಉತ್ಪಾದಿಸಲಾಗುತ್ತದೆ. ಒಂದು ಪಶ್ಚಿಮ ಬಂಗಾಳದಲ್ಲಿ, ಮತ್ತೊಂದು ಆಂಧ್ರಪ್ರದೇಶದ ಕೊಲ್ಲೇರುವಿನ ಕೃಷ್ಣ-ಗೋದಾವರಿ ಜಲಾನಯನ ಪ್ರದೇಶದಲ್ಲಿ. ಈ ಎರಡು ಪ್ರದೇಶದಲ್ಲಿ 40-80 ಪ್ರತಿ ಶತದಷ್ಟು ಉತ್ಪನ್ನವನ್ನು ಇತರ ರಾಜ್ಯಗಳಿಗೂ ಸಾಗಿಸಲಾಗುತ್ತದೆ. ಪೂರೈಕೆ ಸರಪಳಿ ದೊಡ್ಡದಾಗಿದ್ದರೂ ಹಲವು ಸಮಸ್ಯೆಗಳಿವೆ. ಪ್ರಾದೇಶಿಕ ಮೀನು ಪ್ರಭೇದಗಳಾದ ಕಾಟ್ಲಾ, ರೋಹು ಮತ್ತು ಕಾರ್ಪ್ ವರ್ಷಕ್ಕೆ ಎರಡು ಬಾರಿ ಮಾತ್ರ ಸಂತಾನೋತ್ಪತ್ತಿ ಮಾಡುತ್ತವೆ. ಗುಣಮಟ್ಟದ ಬೀಜ ಪಡೆಯಲು ಅನುಕೂಲಕರ ಪರಿಸ್ಥಿತಿಯಲ್ಲಿ ಬೀಜದ ತಳಿಗಳನ್ನು ಸಾಕಬೇಕು. ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯು (ಎನ್​​ಎಫ್‌ಡಿಬಿ) 2007ರಲ್ಲಿ 100 ಮಿಮೀ.ಗೆ ₹ 1 ಗೆ ನಿಗದಿಪಡಿಸಿತ್ತು. 2014ರಲ್ಲಿ ಈ ಬೆಲೆಯನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಮತ್ತು ಕೇಂದ್ರೀಯ ಸಿಹಿನೀರು ಮೀನುಗಾರಿಕೆ ಸಂಸ್ಥೆ (ಸಿಫಾ) ಶಿಫಾರಸ್ಸಿನೊಂದಿಗೆ ₹ 2.50ಕ್ಕೆ ಹೆಚ್ಚಿಸಿತು. ಜೊತೆಗೆ ಕಾರ್ಮಿಕರ ವೇತನ, ಫೀಡ್ ಮತ್ತು ಗುತ್ತಿಗೆ ಬೆಲೆ ಹೆಚ್ಚಾಗಿದ್ದರೂ, ಆಂಧ್ರದ ಮೀನುಗಾರಿಕೆ ಇಲಾಖೆ ಈಗಲೂ 1999ರ ಬೆಲೆಗೆ ಅನುಗುಣವಾಗಿ ಮಾರಾಟ ಮಾಡುತ್ತಿದೆ.

ಪ್ರಸ್ತುತ ಮೀನು ಕೃಷಿ ಎದುರಿಸುತ್ತಿರುವ ಸಮಸ್ಯೆಗಳನ್ನು ನಿಭಾಯಿಸುವ ತುರ್ತು ಅವಶ್ಯಕತೆ ಸರ್ಕಾರಕ್ಕಿದೆ. ಈ ನಿಟ್ಟಿನಲ್ಲಿ ಮೀನು ಸಾಕಣೆ ಮತ್ತು ನರ್ಸರಿ ಕೊಳಗಳಿಗೆ ಗೋದಾವರಿ ನೀರನ್ನು ಏಕಕಾಲದಲ್ಲಿ ಬಿಡುಗಡೆ ಮಾಡಬೇಕು. ಪಶ್ಚಿಮ ಬಂಗಾಳ ಈ ವಿಧಾನ ಬಳಸಿಕೊಂಡು ಹೆಚ್ಚು ಉತ್ಪತ್ತಿ ಮಾಡುತ್ತಿದೆ. ಆಂಧ್ರ ಮೀನಿನ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದರೂ ಬೀಜದ ಗುಣಮಟ್ಟದಲ್ಲಿ ಪಶ್ಚಿಮ ಬಂಗಾಳ ಹೆಚ್ಚಿನ ಆದ್ಯತೆ ಪಡೆಯುತ್ತಿದೆ. ಮೀನು ಸಂಗ್ರಹಿಸಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ರೈತರು ಅನಿವಾರ್ಯವಾಗಿ ತಮ್ಮ ಮೀನುಗಳನ್ನು ಕಡಿಮೆ ಬೆಲೆಗೆ ಮಾರುತ್ತಿದ್ದಾರೆ. ಸರ್ಕಾರ ಈ ಕುರಿತು ತ್ವರಿತ ಕ್ರಮ ತೆಗೆದುಕೊಳ್ಳಬೇಕಿದೆ ಮತ್ತು ಉತ್ತಮ ಬೆಲೆ ನಿಗದಿಪಡಿಸಲು ಟ್ರಸ್ಟ್ ರಚಿಸಬೇಕು. ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಗುಣಮಟ್ಟ ಬೀಜ ಪೂರೈಸಲು ಬ್ರೂಡ್ ಸ್ಟಾಕ್ (ಮರಿ ಸಂಗ್ರಹ) ಸೊಸೈಟಿಯನ್ನು ಪಂಚಾಯತ್ ಮತ್ತು ನೀರಾವರಿ ಇಲಾಖೆಗಳೊಂದಿಗೆ ಸಮನ್ವಯಗೊಳಿಸಬೇಕು. ಮೀನುಗಾರಿಕೆ ಇಲಾಖೆ ಮೀನು ಬೀಜದ ಖರೀದಿಗೆ ಪ್ರಮಾಣ ಪತ್ರ ಮತ್ತು ರಶೀದಿ ನೀಡಬೇಕು. ಮೀನಿನ ಲಭ್ಯತೆಯನ್ನು ಅಂತರ್ಜಾಲದಲ್ಲಿ ಪ್ರಕಟಿಸಬೇಕು. ಆಧುನಿಕ ತಂತ್ರಜ್ಞಾನ, ಮೀನಿಗೆ ಆಹಾರ, ನೀರಿನ ಕೊರತೆ ಹಾಗೂ ಗುಣಮಟ್ಟ ನಿರ್ಣಯಿಸುವ ಪರಿಣಿತರ ಕೊರತೆ ಸವಾಲಾಗಿದೆ. ಸದ್ಯ ಮೀನು ಕೃಷಿ ಕೆಲಸಗಾರರು ನಿಜವಾದ ತಜ್ಞರಿಗೆ ಬದಲಿಯಾಗಿ ಕೆಲಸ ಮಾಡುತ್ತಿದ್ದಾರೆ. ಮೀನುಗಾರಿಕೆ ವಿಜ್ಞಾನ ಅಥವಾ ಸಂಬಂಧಿತ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಸಾಕಷ್ಟು ತರಬೇತಿ ನೀಡಿದರೆ ಈ ಸವಾಲನ್ನು ಎದುರಿಸಬಹುದು.

ಆಂಧ್ರ ತನ್ನ ಒಟ್ಟು ಉತ್ಪಾದನೆ ಶೇ.90ರಷ್ಟು ಮೀನನ್ನು ಬೇರೆ ರಾಜ್ಯಗಳಿಗೆ ಸಾಗಿಸುತ್ತದೆ. ತೆಲಂಗಾಣ ರಾಜ್ಯವೂ ನೀಲಿ ಕ್ರಾಂತಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಆದರೆ, ರಾಜ್ಯದಲ್ಲಿ ಮೀನು ಸೇವನೆ ಪ್ರಮಾಣವು ತುಲನಾತ್ಮಕವಾಗಿ ಬಹಳ ಕಡಿಮೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಮೀನು ಮಾರುಕಟ್ಟೆ ಕುರಿತ ಕೆಟ್ಟ ವಾತಾವರಣದ ಚಿತ್ರಣ, ಗ್ರಾಹಕರ ಅವಶ್ಯಕತೆಗಳಿಗೆ ತಕ್ಕಂತೆ ಮಾಂಸ ನೀಡದಿರುವುದು ಹಾಗೂ ಸ್ವಚ್ಛತೆ ಕೊರತೆ. ಪ್ರಮುಖ ನಗರ ಮತ್ತು ಪಟ್ಟಣಗಳಲ್ಲಿ ಶುದ್ಧ ಮೀನು ಮಾರುಕಟ್ಟೆಗಳನ್ನು ಸ್ಥಾಪಿಸಿದರೆ ರಾಜ್ಯದ ಮೀನಿನ ಮಾಂಸ ಸೇವನೆ ಪ್ರಮಾಣ ಹೆಚ್ಚಿಸಬಹುದು. ಸ್ಥಳೀಯ ಮಾರುಕಟ್ಟೆಗಳು ಗ್ರಾಹಕರ ನಿರೀಕ್ಷೆಗಳನ್ನು ಈಡೇರಿಸುವ ಮಟ್ಟದಲ್ಲಿಲ್ಲ. ದೊಡ್ಡ ನಗರಗಳಲ್ಲಿ ಜನರು ಆಹಾರವನ್ನು ಆನ್​ಲೈನ್ ಮೂಲಕ ತರಿಸಿಕೊಳ್ಳುತ್ತಾರೆ. ಸ್ಥಳೀಯ ಮೀನು ಉದ್ಯಮ ಇದರ ಲಾಭ ಪಡೆದು ಕ್ಲೌಡ್ ಕಿಚನ್​​ಗಳನ್ನು ಸ್ಥಾಪಿಸಿ ಗ್ರಾಹಕರಿಗೆ ಮೀನಿನ ಖಾದ್ಯಗಳನ್ನು ತಲುಪಿಸಬೇಕು. ಸೀ ಫುಡ್ ಫೆಸ್ಟಿವಲ್​​ಗಳನ್ನು ಅಲ್ಲಲ್ಲಿ ಆಯೋಜಿಸುವ ಮೂಲಕವೂ ಗ್ರಾಹಕರನ್ನು ಸೆಳೆದು ಮಾರುಕಟ್ಟೆ ಹಿಗ್ಗಿಸಿಕೊಳ್ಳಲು ಮುಂದಾಗಬೇಕು.

ಭಾರತೀಯ ಸಿಹಿ ನೀರು ಮೀನುಗಾರಿಕೆ ರೈತರು ಪ್ರಾದೇಶಿಕ ಪ್ರಭೇದಗಳ ಜೊತೆಗೆ ವಿದೇಶಿ ಪ್ರಭೇದಗಳಾದ ಪಂಗಾಸಿಯಸ್ ಮತ್ತು ತಿಲಾಪಿಯಾವನ್ನೂ ಸಾಕುತ್ತಿದ್ದಾರೆ. ಮುರ್ರೆಲ್ ಮತ್ತು ಪಫರ್ ಫಿಶ್ ಕೃಷಿ ಕೂಡ ಲಾಭದಾಯಕವಾಗಿದೆ. ಗುಣಮಟ್ಟ ಉತ್ಪನ್ನಗಳನ್ನು ರಫ್ತು ಮಾಡಲು ಸೀಗಡಿ, ಮೀನು ಕೃಷಿಗೆ ಪ್ರೋತ್ಸಾಹ ಮತ್ತು ಸಬ್ಸಿಡಿ ನೀಡಬೇಕು. ಮೀನು ಬೀಜದ ಜೊತೆಗೆ ಮೊಟ್ಟೆ ಕೇಂದ್ರದಲ್ಲಿ ಬೆಳೆದ ಸೀಗಡಿಗಳನ್ನು ಒದಗಿಸಬೇಕು. ಇದರಿಂದ ಮೀನುಗಾರಿಕಾ (ಆಕ್ವಾ) ರೈತರಿಗೆ ಆರ್ಥಿಕ ಭದ್ರತೆ ಇರುತ್ತದೆ. ಸಿಹಿ ನೀರಿನ ಜಲಾಶಯಗಳು ಇತ್ತೀಚಿನ ಉತ್ತಮ ಮಳೆಗೆ ತುಂಬಿಕೊಳ್ಳುತ್ತಿವೆ ಎಂಬುದು ಸಂತಸದ ವಿಷಯ. ರಾಜ್ಯದಲ್ಲಿ ಮೀನು ವ್ಯವಹಾರ ಹೆಚ್ಚಿಸಲು ಈ ಜಲ ಸಂಪನ್ಮೂಲಗಳನ್ನು ಮೀನು ಕೃಷಿಗೆ ಪೂರಕವಾಗಿ ಒದಗಿಸಬೇಕು. ಇದರಿಂದ ತೆಲುಗು ರಾಜ್ಯಗಳ ಜನರಿಗೆ ಉದ್ಯೋಗ ಮತ್ತು ಆದಾಯ ದೊರೆಯುವಂತಾಗುತ್ತದೆ.

ABOUT THE AUTHOR

...view details