ಪಾಟ್ನಾ (ಬಿಹಾರ):ಬಿಹಾರದ ಮೀನುಗಾರಿಕಾ ಇಲಾಖೆ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದ್ದು, ಇದರ ಮೂಲಕ ಆರ್ಡರ್ ಮಾಡಿದರೆ, ಮೀನನ್ನು ಮನೆಗೆ ತಲುಪಿಸಲಾಗುತ್ತದೆ.
ಈ ಆ್ಯಪ್ ಮೂಲಕ ಮೀನು ಮನೆಗೇ ತಲುಪುತ್ತದೆ... ಯಾವುದೇ ಡೆಲಿವರಿ ಚಾರ್ಜ್ ಇಲ್ಲ! - 'ಡಿಒಎಫ್' ಎಂಬ ಆ್ಯಪ್
ಮೀನುಗಳನ್ನು ಮನೆಗೆ ತಲುಪಿಸಲು ಬಿಹಾರ ಸರ್ಕಾರ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಡೆಲಿವರಿ ಚಾರ್ಜ್ ಇಲ್ಲದೇ ಎರಡು-ಮೂರು ಗಂಟೆಗಳಲ್ಲಿ ಮೀನು ಮನೆಗೆ ತಲುಪಲಿದೆ.
![ಈ ಆ್ಯಪ್ ಮೂಲಕ ಮೀನು ಮನೆಗೇ ತಲುಪುತ್ತದೆ... ಯಾವುದೇ ಡೆಲಿವರಿ ಚಾರ್ಜ್ ಇಲ್ಲ!](https://etvbharatimages.akamaized.net/etvbharat/prod-images/768-512-7279195-311-7279195-1589981946205.jpg)
prem kumar
ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದ್ದು, ಫ್ರೀ ಹೋಂ ಡೆಲಿವರಿ ಮಾಡಲಾಗುತ್ತಿದೆ.
"ಮೀನುಗಾರಿಕಾ ಇಲಾಖೆಯು ತಾಜಾ ಮೀನುಗಳನ್ನು ಮನೆಗೆ ತಲುಪಿಸಲು 'ಡಿಒಎಫ್' ಎಂಬ ಆ್ಯಪ್ ತಯಾರಿಸಿದೆ. ಡೆಲಿವರಿ ಚಾರ್ಜ್ ಇಲ್ಲದೆ ಎರಡು-ಮೂರು ಗಂಟೆಗಳಲ್ಲಿ ಮೀನು ತಲುಪಿಸಲಾಗುವುದು. ಲಾಕ್ ಡೌನ್ ನಡುವೆ ಇದು ಜನಪ್ರಿಯವಾಗುತ್ತಿದೆ" ಎಂದು ಕೃಷಿ ಸಚಿವ ಡಾ. ಪ್ರೇಮ್ ಕುಮಾರ್ ಹೇಳಿದ್ದಾರೆ.