ನವದೆಹಲಿ:ಸಿನಿಮಾದಿಂದ ರಾಜಕೀಯ ಅಖಾಡಕ್ಕೆ ಧುಮುಕಿ ಚೊಚ್ಚಲ ಬಾರಿಗೆ ಸಂಸತ್ ಪ್ರವೇಶಿಸಿರುವ ಸಂಸದೆ ನುಸ್ರತ್ ಜಹಾನ್ ಟರ್ಕಿಯಲ್ಲಿ ಉದ್ಯಮಿ ನಿಖಿಲ್ ಜೈನ್ ಎಂಬವರನ್ನು ವರಿಸಿದ್ದಾರೆ.
ಬುಧವಾರ ಟರ್ಕಿಯ ಬೋಡ್ರಮ್ನಲ್ಲಿ ನಡೆದ ಸರಳ ಸಮಾರಂಭದಲ್ಲಿ 29 ವರ್ಷದ ನಟಿ ಹಾಗೂ ನೂತನ ಸಂಸದೆ ನುಸ್ರತ್ ಜಹಾನ್ ಉದ್ಯಮಿ ನಿಖಿಲ್ ಜೈನ್ರನ್ನು ಮದುವೆಯಾಗಿದ್ದು, ಎರಡೂ ಮನೆಯ ಕುಟುಂಬಸ್ಥರು ಹಾಗೂ ಆಪ್ತರು ಭಾಗಿಯಾಗಿದ್ದರು.