ನವದೆಹಲಿ:ಭಾರತೀಯ ದೇಶಿ ವಿಮಾನಯಾನ ಸಂಚಾರದ ದಟ್ಟಣೆಯು ಕಳೆದ 5 ವರ್ಷಗಳಲ್ಲಿ ಮೊದಲ ಬಾರಿಗೆ ಇಳಿಕೆ ಗತಿಯಲ್ಲಿ ಸಾಗುತ್ತಿದೆ ಎಂದುಅಂತಾರಾಷ್ಟ್ರೀಯ ವಾಯು ಸಂಚಾರ ಸಂಸ್ಥೆತಿಳಿಸಿದೆ.
ರೆಕ್ಕೆ ಕತ್ತರಿಸಿಕೊಳ್ತಿದೆ ಲೋಹದ ಹಕ್ಕಿಗಳ ಉದ್ಯಮ: ಬೆಳವಣಿಗೆ ಗತಿ ಇಳಿಮುಖ -
ದೇಶಿ ವಾಯುಯಾನ ಕ್ಷೇತ್ರದಲ್ಲಿ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ದೇಶ ಭಾರತವೆಂಬ ಹೆಗ್ಗಳಿಕೆ ಇತ್ತು. ಆದ್ರೆ, ಜೆಟ್ ಏರ್ವೇಸ್ ಹಾಗೂ ಗ್ಲೋಬಲ್ ಏರ್ಲೈನ್ಸ್ ಹಾರಾಟ ಸ್ಥಗಿತ ಏರ್ ಟ್ರಾಫಿಕ್ ಕ್ಷೀಣಿಸುವುದಕ್ಕೆ ಪ್ರಮುಖ ಕಾರಣವಾಗಿದೆ.
ಇದುವರೆಗೂ 290 ವಿಮಾನಗಳು ಸೇವೆಯಿಂದ ವಾಪಸ್ ಆಗಿವೆ. ಆದಾಯ, ಪ್ರಯಾಣಿಕರ ಕಿಲೋಮೀಟರ್ (ಆರ್ಪಿಕೆ) ಮಾಪನದಲ್ಲಿ ಎರಡಂಕಿಯ ಬೆಳವಣಿಗೆ ಸಾಧಿಸುತ್ತಿದ್ದ ದೇಶಿ ವಿಮಾನ ಸಾರಿಗೆಯೂ 2014ರ ಜನವರಿ ಬಳಿಕ ಋಣಾತ್ಮಕ ಬೆಳವಣಿಗೆ ತೋರಿದೆ ಎಂದು ಅಂತಾರಾಷ್ಟ್ರೀಯ ವಾಯು ಸಂಚಾರ ಸಂಸ್ಥೆ (ಐಎಟಿಎ) ಹೇಳಿದೆ.
ಬಲಿಷ್ಟ ವೃದ್ಧಿಯ ಬಳಿಕ ಭಾರತದ ಆರ್ಪಿಕೆ ಮಾರುಕಟ್ಟೆ ಬೆಳವಣಿಗೆ ದರ ಕಳೆದ ವರ್ಷಕ್ಕಿಂತ ಶೇ 0.5ರಷ್ಟು ಇಳಿಮುಖವಾಗಿದೆ. ಕಳೆದ ಐದು ವರ್ಷಗಳಲ್ಲಿ ಅತ್ಯಂತ ಕಳಪೆ ಮಟ್ಟದ ಸಾಧನೆ ಇದಾಗಿದ್ದು, ಜೆಟ್ ಏರ್ವೇಸ್ ಸೇವೆಯಿಂದ ಹಿಂದಕ್ಕೆ ಸರಿದಿದ್ದೇ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.