ಕಟಕ್:ಒಡಿಶಾದ ಕಟಕ್ನಲ್ಲಿರುವ ಎಸ್‌ಸಿಬಿ ಮೆಡಿಕಲ್ ಕಾಲೇಜಿನಲ್ಲಿ ಹಂದಿ ಜ್ವರಕ್ಕೆ ಓರ್ವ ಮಹಿಳೆ ಮೃತಪಟ್ಟಿದ್ದಾಳೆ.
ಕೊರೊನಾ ಆರ್ಭಟದ ನಡುವೆ ಒಡಿಶಾದಲ್ಲಿ ಹಂದಿ ಜ್ವರಕ್ಕೆ ಮಹಿಳೆ ಬಲಿ - ಒಡಿಶಾದಲ್ಲಿ ಹಂದಿ ಜ್ವರ
ದೇಶದಾದ್ಯಂತ ಕೊರೊನಾ ಸೋಂಕು ತಾಂಡವವಾಡುತ್ತಿದೆ. ಈ ಮಧ್ಯೆ ಒಡಿಶಾದಲ್ಲಿ ಓರ್ವ ಮಹಿಳೆ ಹಂದಿ ಜ್ವರಕ್ಕೆ ಬಲಿಯಾಗಿದ್ದಾಳೆ.
ಒಡಿಶಾದಲ್ಲಿ ಹಂದಿ ಜ್ವರಕ್ಕೆ ಮಹಿಳೆ ಸಾವು
ಮೂಲಗಳ ಪ್ರಕಾರ, ಮಹಿಳೆ ಭುವನೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಅನಾರೋಗ್ಯದ ಕಾರಣ ಅವರನ್ನು ಎಸ್‌ಸಿಬಿಯಲ್ಲಿ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ತಡರಾತ್ರಿ ನಿಧನರಾಗಿದ್ದಾರೆ.