ಮಾಲೆ (ಮಾಲ್ಡೀವ್ಸ್): ಕೊರೊನಾ ಲಾಕ್ಡೌನ್ನಿಂದಾಗಿ ಮಾಲ್ಡೀವ್ಸ್ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ 'ಸಮುದ್ರ ಸೇತು ಮಿಷನ್'ನ ಮೊದಲ ಹಂತದಲ್ಲಿ ಮಾಲೆ ಬಂದರಿಗೆ ತಲುಪಿರುವ 'ಐಎನ್ಎ ಜಲಾಶ್ವ ಯುದ್ಧನೌಕೆ' ಅಂತಿಮ ಹಂತದ ಸಿದ್ಧತೆ ನಡೆಸಿದೆ.
ಮಾಲ್ಡೀವ್ಸ್‌ನಲ್ಲಿರುವ ಭಾರತೀಯರ ಹೊತ್ತು ತರಲಿದೆ 'ಐಎನ್ಎ ಜಲಾಶ್ವ ಯುದ್ಧನೌಕೆ' - Lockdown
ಮೊದಲ ಹಂತದಲ್ಲಿ ಎರಡು ನೌಕೆಗಳ ಮೂಲಕ ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಪ್ರಜೆಗಳಲ್ಲಿ 1000 ಮಂದಿಯನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ.

ಮಾಲ್ಡೀವ್ಸ್‌ನಲ್ಲಿರುವ ಭಾರತದ ಹೈ ಕಮಿಷನ್‌ನ ಪ್ರಕಾರ, ಭಾರತೀಯರನ್ನು ವಾಪಸ್ ಕಳುಹಿಸಲು ಪಟ್ಟಿ ಸಿದ್ದಗೊಂಡಿದೆ. ಪಟ್ಟಿಯಲ್ಲಿರುವ ಭಾರತೀಯ ಪ್ರಜೆಗಳಿಂದ ಸ್ಥಳಾಂತರಿಸುವ ಸೇವಾ ಶುಲ್ಕವಾಗಿ 600 ಮಾಲ್ಡೀವಿಯನ್ ರುಫಿಯಾ ಶುಲ್ಕ (ಅಮೆರಿಕನ್ ಡಾಲರ್ $ 40) (₹ 3000) ವಿಧಿಸಲಾಗುತ್ತದೆ. ಭಾರತೀಯ ಪ್ರಜೆಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅಲ್ಲದೇ, ಹೆಚ್ಚು ರಕ್ಷಣೆಯನ್ನೂ ಒದಗಿಸಲಾಗಿದೆ.
ಸಾಮಾಜಿಕ ಅಂತರವನ್ನು ಗಮನದಲ್ಲಿಟ್ಟುಕೊಂಡು ಮೊದಲ ಹಂತದಲ್ಲಿ 1,000 ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಯೋಜಿಸಲಾಗಿದೆ. ರಕ್ಷಣಾ ಕವಚ, ಮಾಸ್ಕ್ ಧರಿಸಿ ರಕ್ಷಣಾ ಸಿಬ್ಬಂದಿ, ಸ್ವಯಂ ಸೇವಕರು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಎರಡೂ ಹಡಗುಗಳು ಸಾವಿರ ಭಾರತೀಯರನ್ನು ಹೊತ್ತು ಕೇರಳದ ಕೊಚ್ಚಿಗೆ ಆಗಮಿಸಲಿವೆ. ತದ ನಂತರ ಭಾರತೀಯರು ತಂಗಲು ಬೇಕಾದ ವ್ಯವಸ್ಥೆಯನ್ನು ಕೇರಳ ಸರ್ಕಾರ ಮಾಡಲಿದೆ.