ಹೈದ್ರಾಬಾದ್:ಜೀವನದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕೆಂದರೆ ಆರಂಭಿಕ ಮೆಟ್ಟಿಲುಗಳೇ ಮುಂದೆ ಭದ್ರ ಬುನಾದಿಯಾಗುತ್ತವೆ. ಅಂತೆಯೇ ವೃತ್ತಿಯ ಆರಂಭದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು, ದೊಡ್ಡ ಕಂಪನಿಗಳನ್ನ ಸ್ಥಾಪಿಸಿ ಬಿಲೇನಿಯರ್ಗಳಾದ ಅನೇಕ ಸಾಧಕರ ಮಾಹಿತಿ ಹೀಗಿದೆ ನೋಡಿ...
ಅಂತಹ ಬಿಲೇನಿಯರ್ ಸಾಧಕರಾದ ಅಮೇಜಾನ್ ಸಿಇಒ ಜೆಫ್ ಬೆಜೊನ್ಸ್ ಕೂಡ ಅರಂಭಿಕ ದಿನಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿದಿದ್ದರು. ಇಂತಹ ಬಿಲೇನಿಯರ್ಗಳಲ್ಲಿ ಕೆಲವರ ಮಾಹಿತಿ ಇಲ್ಲಿದೆ. ವಿಶ್ವದ ಶ್ರೀಮಂತ ವ್ಯಕ್ತಿಯಾಗಿರುವ ಜೆಫ್ ಬೆಜೊನ್ಸ್ ಮೆಕ್ಡೋನಾಲ್ಡ್ಸ್ನಲ್ಲಿ ಗಂಟೆಗೆ ಕೇವಲ 2.69 ಡಾಲರ್ಗೆ ಕೆಲಸ ಮಾಡಿದ್ದರು. ಇವರು ಮೆಕ್ಡೋನಾಲ್ಡ್ಸ್ನ ಫಾಸ್ಟ್ ಫುಡ್ ತಯಾರಿಸುವ ಕೆಲಸದಲ್ಲಿದ್ದರು. ಹಾಗೆಯೇ ಮತ್ತೋರ್ವ ಬಿಲೇನಿಯರ್ ಮೈಕಲ್ ಡೆಲ್ ಕೂಡ ತಮ್ಮ 12ನೇ ವಯಸ್ಸಿನಲ್ಲಿ ಚೈನಿಸ್ ರೆಸ್ಟೋರೆಂಟ್ನಲ್ಲಿ ಡಿಶ್ ವಾಶರ್ ಕೆಲಸ ಮಾಡಿದ್ದರು. ಇಂದು ಪ್ರಖ್ಯಾತ ಡೆಲ್ ಕಂಪನಿ ಸಂಸ್ಥಾಪಿಸಿ, ಸಿಇಒ ಆಗಿದ್ದಾರೆ.
ವರ್ಜಿನ್ ಗ್ರೂಪ್ನ ರಿಚರ್ಡ್ ಬ್ರಾನ್ಸನ್ ಕೂಡ ತಮ್ಮ ಸಾಧನೆಗೆ ಅಡಿಯಿಟ್ಟಿದ್ದು ಕೇವಲ 16ನೇ ವಯಸ್ಸಿನಲ್ಲಿ. 1966ರಲ್ಲಿ ಸ್ಟೂಡೆಂಟ್ ಮ್ಯಾಗಜಿನ್ ಮೂಲಕ ಆರಂಭವಾದ ಇವರ ವೃತ್ತಿ ಜೀವನ ಇಂದು ಬಿಲೇನಿಯರ್ ಆಗುವ ಮಟ್ಟಕ್ಕೆ ತಲುಪಿದೆ. ಇವರು ಕೇವಲ 100 ಪೌಂಡ್ಗಳಿಂದ ಮ್ಯಾಗಜಿನ್ ಶುರು ಮಾಡಿದ್ದರು.
ಇನ್ನು ಸ್ನ್ಯಾಪ್ಚಾಟ್ ಮೆಸ್ಸೇಜಿಂಗ್ ಆ್ಯಪ್ ಯಾರಿಗೆ ಗೊತ್ತಿಲ್ಲಾ ಹೇಳಿ. ಜಗತ್ತಿನಾದ್ಯಂತ ಕೋಟ್ಯಂತರ ಜನ ಉಪಯೋಗಿಸುವ ಈ ಆ್ಯಪ್ ಆರಂಭಿಸಿದ್ದು ಅಮೆರಿಕದ ಇವಾನ್ ಸ್ಪೀಗೆಲ್, ಇವರೂ ಕೂಡ ಆರಂಭದಲ್ಲಿ ಪಾನೀಯ ಬ್ರಾಂಡ್ ರೆಡ್ ಬುಲ್ನಿಂದ ತಿರಸ್ಕರಿಸಲ್ಪಟ್ಟಿದ್ದರು.
ಇನ್ನು ಇಂದಿನ ದಿನಗಳಲ್ಲಿ ಪ್ರಯಾಣಿಕರ ಸ್ನೇಹಿಯಾಗಿರುವ ಉಬರ್ ಆ್ಯಪ್ ಆಂಭಿಸಿದವರು ಅಮೆರಿಕನ್ ಬಿಲೇನಿಯರ್ ಟ್ರಾವಿಸ್ ಕಲನಿಕ್. ಇವರೂ ಸೇಲ್ಸ್ಮನ್ ಆಗಿ ಕೆಲಸ ಮಾಡಿದ್ದರು.