ಅಗರ್ತಲಾ (ತ್ರಿಪುರ): ದೇಶಾದ್ಯಂತ ಕೊರೊನಾ ಭೀತಿ ಹೆಚ್ಚಾಗುತ್ತಿದ್ದು, ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ಕೊರೊನಾ ತಡೆಗೆ ಇನ್ನಿಲ್ಲದ ಕ್ರಮ ಕೈಗೊಳ್ಳುತ್ತಿವೆ. ಈ ನಡುವೆ ತ್ರಿಪುರದ ಅಗರ್ತಲಾದಲ್ಲಿ ಮೊಬೈಲ್ ಕೊರೊನಾ ಟೆಸ್ಟಿಂಗ್ ಕಿಯೋಸ್ಕ್ ಆರಂಭಿಸಲಾಗಿದೆ. ಅಗರ್ತಲಾದ ಸ್ಮಾರ್ಟ್ ಸಿಟಿ ಯೋಜನೆಯಡಿ ಕೊರೊನಾ ಪರೀಕ್ಷೆಗಾಗಿ ಸಂಚಾರಿ ಫೋನ್ಬೂತ್ ಮಾದರಿಯ ವ್ಯವಸ್ಥೆ ಆರಂಭಿಸಲಾಗಿದೆ.
ಈ ವಿನ್ಯಾಸ ಯಶಸ್ವಿಯಾದರೆ, ಇನ್ನಷ್ಟು ಕಡೆ ಅಭಿವೃದ್ಧಿ ಪಡಿಸಲಾಗುವುದು ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಚಾರಿ ಪರೀಕ್ಷಾ ಘಟಕವು ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿ ಮೊದಲ ಬಾರಿಗೆ ಆರಂಭಿಸಲಾಗಿದ್ದು, ಈಗಾಗಲೇ ಜನರ ಗಂಟಲು ಮಾದರಿಯನ್ನು ಸಂಗ್ರಹಿಸಲು ಆರಂಭಿಸಿದೆ.