ಕರ್ನಾಟಕ

karnataka

ETV Bharat / bharat

ಏಮ್ಸ್​​ನಲ್ಲಿ ವೈದ್ಯಕೀಯ ಅಧ್ಯಯನ ಮಾಡಲು ಆಯ್ಕೆಯಾದ ಮೊದಲ ಗುಜ್ಜರ್​ ಸಮುದಾಯದ ಯುವತಿ! - ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ

ಕಾಶ್ಮೀರದ ರಾಜೌರಿಯ ಗುಜ್ಜರ್​ ಸಮೂದಾಯದ ವಿದ್ಯಾರ್ಥಿನಿ ಏಮ್ಸ್​​ನಲ್ಲಿ ವೈದ್ಯಕೀಯ ಅಧ್ಯಯನಕ್ಕೆ ಅರ್ಹತೆ ಪಡೆದು ಎಲ್ಲರ ಹೆಮ್ಮೆಗೆ ಪಾತ್ರರಾಗಿದ್ದಾರೆ. ಜೂನ್​ನಲ್ಲಿ ಪರೀಕ್ಷೆ ಬರೆದಿದ್ದ ಇರ್ಮಿಮ್​ ಶಮೀಮ್ಮ್​​ ಆರ್ಥಿಕ ಸವಾಲು, ತೊಂದರೆಗಳ ನಡುವೆ ಸಹ ತಮ್ಮ ಗುರಿ ಸಾಧಿಸಲು ಮುಂದಾಗಿದ್ದಾರೆ.

ಏಮ್ಸ್​ಗೆ ಅರ್ಹತೆ ಪಡೆದ ಇರ್ಮಿಮ್​ ಶಮಿಮ್ಮ

By

Published : Sep 3, 2019, 5:47 AM IST

ರಾಜೌರಿ, (ಕಾಶ್ಮೀರ): ಇದೇ ಮೊಟ್ಟ ಮೊದಲ ಸಲ ಗುಜ್ಜರ್​ ಸಮುದಾಯದ ವಿದ್ಯಾರ್ಥಿನಿ ಇರ್ಮಿಮ್​​ ಏಮ್ಸ್​ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ನಲ್ಲಿ ವೈದ್ಯಕೀಯ ಅಧ್ಯಯನಕ್ಕೆ ಅರ್ಹತೆ ಪಡೆದು, ರಾಜೌರಿ ಜಿಲ್ಲೆಯ ಮೊದಲ ಗುಜ್ಜರ್ ಯುವತಿ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.

ಜೂನ್‌ನಲ್ಲಿ ನಡೆದ ಏಮ್ಸ್​ನ ವೈದ್ಯಕೀಯ ಅಧ್ಯಯನಕ್ಕೆ ಅರ್ಹತೆ ಪಡೆದ, ಶಮೀಮ್ ಅವರನ್ನು ಭಾನುವಾರ ಭಾರತೀಯ ಸೇನೆ ಸನ್ಮಾನಿಸಿದೆ.

ಏಮ್ಸ್​ಗೆ ಅರ್ಹತೆ ಪಡೆದ ಇರ್ಮಿಮ್​ ಶಮಿಮ್ಮ

ಪ್ರವೇಶ ಪರೀಕ್ಷೆಯನ್ನು ಭೇದಿಸಲು ಎಂ.ಎಸ್.ಶಮೀಮ್ಮ್​ ಅನೇಕ ಸವಾಲುಗಳನ್ನು ತೆಗೆದುಕೊಂಡರು. ಹಿಂದುಳಿದ ಸಮುದಾಯಕ್ಕೆ ಸೇರಿದ ಆಕೆಯ ಕುಟುಂಬ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿತ್ತು, ತಮ್ಮೂರಿನಿಂದ ಉತ್ತಮ ಶಾಲೆಗೆ ಹೋಗಲು, ಪ್ರತಿ ನಿತ್ಯ ಕ್ರಮಿಸುತ್ತಿದದ್ದು ಬರೋಬ್ಬರಿ 10 ಕಿಲೋ ಮೀಟರ್, ಅದನ್ನು ನಡೆದುಕೊಂಡೇ ಹೋಗುತ್ತಿದ್ದಳು ಎಂಬುದು ಮತ್ತೊಂದು ಅಚ್ಚರಿಯ ಸಂಗತಿ.

ಜಿಲ್ಲಾ ಅಭಿವೃದ್ಧಿ ಆಯುಕ್ತ ಐಜಾಜ್ ಅಸಾದ್, ಎಂ.ಎಸ್.ಶಮೀಮ್ ಅವರ ಸಾಧನೆಯನ್ನು ಶ್ಲಾಘಿಸಿದರು ಮತ್ತು ಭವಿಷ್ಯದಲ್ಲಿ ಅಧ್ಯಯನವನ್ನು ಮುಂದುವರೆಸಲು ಸಾಧ್ಯವಿರುವ ಎಲ್ಲ ಸಹಾಯದ ಬಗ್ಗೆ ಭರವಸೆ ನೀಡಿದ್ದಾರೆ.

ABOUT THE AUTHOR

...view details