ಕರ್ನಾಟಕ

karnataka

ETV Bharat / bharat

ಮೊದಲ ಸಂಪುಟ ಸಭೆಯಲ್ಲೇ ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ

ಇಂದು ನಡೆದ ಮೊದಲ ಸಂಪುಟ ಸಭೆಯಲ್ಲಿ ಪ್ರಧಾನಮಂತ್ರಿ ವಿದ್ಯಾರ್ಥಿ ವೇತನ ಯೋಜನೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ಈ ಮೂಲಕ ದೇಶದ ರಕ್ಷಕರಿಗೆ ಈ ಮೊದಲ ನಿರ್ಧಾರ ಸಮರ್ಪಣೆ ಎಂದು ಮೋದಿ ಟ್ವೀಟ್​ ಮಾಡಿದ್ದಾರೆ.

ಪ್ರಧಾನಿ ಮೋದಿ

By

Published : May 31, 2019, 9:43 PM IST

ನವದೆಹಲಿ:ಸರ್ಕಾರ ರಚನೆ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಮೊದಲ ಸಂಪುಟ ಸಭೆ ನಡೆಸಿದ ಪ್ರಧಾನಿ ಮೋದಿ ಮಹತ್ವ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ.

ಇಂದು ನಡೆದ ಸಂಪುಟ ಸಭೆಯಲ್ಲಿ ಪ್ರಧಾನಮಂತ್ರಿ ವಿದ್ಯಾರ್ಥಿ ವೇತನ ಯೋಜನೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ಈ ಮೂಲಕ ದೇಶದ ರಕ್ಷಕರಿಗೆ ಈ ಮೊದಲ ನಿರ್ಧಾರ ಸಮರ್ಪಣೆ ಎಂದು ಮೋದಿ ಟ್ವೀಟ್​ ಮಾಡಿದ್ದಾರೆ.

ಈ ಯೋಜನೆಯಡಿ ಹುತಾತ್ಮ ಯೋಧರ ಮಕ್ಕಳಿಗೆ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನದ ಮೊತ್ತವನ್ನು ಏರಿಸಲಾಗಿದೆ. ಉಗ್ರರ ಅಥವಾ ನಕ್ಸಲರ ದಾಳಿಯಲ್ಲಿ ಮೃತಪಟ್ಟ ರಾಜ್ಯ ಪೊಲೀಸರ ಮಕ್ಕಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ.

ಅದರಂತೆ ಗಂಡು ಮಕ್ಕಳಿಗೆ ಮಾಸಿಕ 2500ರೂ. ಹಾಗೂ ಹೆಣ್ಣು ಮಕ್ಕಳಿಗೆ 3000 ರೂ. ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಲಾಗಿದೆ.

ರಾಷ್ಟ್ರೀಯ ರಕ್ಷಣಾ ನಿಧಿಯಡಿ ಮಾಜಿ ಯೋಧರು, ಸಂಸತ್​ ಪಡೆ ಹಾಗೂ ರೈಲ್ವೆ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸಿ ಮಡಿದವರ ಪತ್ನಿ ಹಾಗೂ ಮಕ್ಕಳ ತಾಂತ್ರಿಕ ಹಾಗೂ ಉನ್ನತ ಶಿಕ್ಷಣಕ್ಕಾಗಿ ಈ ಯೋಜನೆ ಜಾರಿ ಮಾಡಲಾಗಿತ್ತು.

ನಿನ್ನೆಯಷ್ಟೇ ಪ್ರಧಾನಿ ಮೋದಿ ಹಾಗೂ ಅವರ ಟೀಂ ಪ್ರಮಾಣವಚನ ಸ್ವೀಕರಿಸಿತ್ತು. ಇಂದು ಸಚಿವ ಸ್ಥಾನಗಳ ಹಂಚಿಕೆ ಸಹ ನಡೆದಿತ್ತು. ಇದಾದ ನಂತರ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಸಿದ ಪ್ರಧಾನಿ ಮೋದಿಯವರು ಈ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details