ಉತ್ತರಾಖಂಡ/ಕೇರಳ/ಮಹಾರಾಷ್ಟ್ರ:ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದ್ದು, ಉತ್ತರಾಖಂಡ, ಕೇರಳ, ಮಹಾರಾಷ್ಟ್ರ ಹಾಗೂ ಕರ್ನಾಟಕ ಸೇರಿ ಇಂದು ಮತ್ತೆ ಐದು ಪ್ರಕರಣಗಳು ವರದಿಯಾಗಿದೆ.
ಉತ್ತರಾಖಂಡ, ಕೇರಳ, ಮಹಾರಾಷ್ಟ್ರದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಪತ್ತೆ - ಉತ್ತರಾಖಂಡ
ಉತ್ತರಾಖಂಡ, ಕೇರಳ, ಮಹಾರಾಷ್ಟ್ರ ಹಾಗೂ ಕರ್ನಾಟಕ ಸೇರಿ ಭಾರತದಲ್ಲಿ ಇಂದು ಮತ್ತೆ ಐದು ಕೊವಿಡ್-19 ಪ್ರಕರಣಗಳು ವರದಿಯಾಗಿದೆ.
ಫಿನ್ಲೆಂಡ್‌ನಿಂದ ಡೆಹ್ರಾಡೂನ್ಗೆ ಹಿಂತಿರುಗಿದ ಇಂದಿರಾ ಗಾಂಧಿ ರಾಷ್ಟ್ರೀಯ ಅರಣ್ಯ ಸಂಶೋಧನಾ ತರಬೇತುದಾರನಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಉತ್ತರಾಖಂಡದಲ್ಲಿ ಮೊದಲ ಕೊವಿಡ್-19 ಪ್ರಕರಣ ವರದಿಯಾದಂತಾಗಿದೆ.
ಕೇರಳದ ತಿರುವನಂತಪುರಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಮತ್ತೆ ಇಬ್ಬರು ವ್ಯಕ್ತಿಗಳ ರಕ್ತ ಮಾದರಿ ವರದಿ ಧನಾತ್ಮಕ ಎಂದು ಬಂದಿದ್ದು, ಕೇರಳದಲ್ಲಿ ಸೋಂಕಿತರ ಸಂಖ್ಯೆ 24ಕ್ಕೆ ಏರಿಕೆಯಾದಂತಾಗಿದೆ. ಇನ್ನು ಮಹಾರಾಷ್ಟ್ರದ ಪುಣೆಯಲ್ಲಿ ಕೂಡ ಇಂದು ಮತ್ತೊಂದು ಕೊವಿಡ್-19 ಪ್ರಕರಣ ವರದಿಯಾಗಿದೆ. ಇಲ್ಲಿ ಸೋಂಕು ಪತ್ತೆಯಾದ ವ್ಯಕ್ತಿ ಜಪಾನ್‌ಗೆ ಭೇಟಿ ನೀಡಿ ಬಂದಿದ್ದ. ಈ ಮೂಲಕ ಪುಣೆಯಲ್ಲಿ 16 ಪ್ರಕರಣಗಳು ದಾಖಲಾಗಿದ್ದು ಒಟ್ಟಾರೆ ಮಹಾರಾಷ್ಟ್ರದಲ್ಲಿ 32 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.