ವಿಶಾಖಪಟ್ಟಣ (ಆಂಧ್ರಪ್ರದೇಶ): ಹಿಂದೂಸ್ಥಾನ್ ಶಿಪ್‌ಯಾರ್ಡ್ ಲಿಮಿಟೆಡ್ (HSL)ನಲ್ಲಿ ಭಾರಿ ಗಾತ್ರದ ಕ್ರೇನ್ ಕುಸಿದುಬಿದ್ದ 11 ಮಂದಿ ಮೃತಪಟ್ಟಿದ್ದಾರೆ. ಘಟನೆಗೆ ತೆಲುಗುನಾಡು ಟ್ರೇಡ್ ಯೂನಿಯನ್ ಕೌನ್ಸಿಲ್(TNTUC) ನಾಯಕ ರಮಣಮೂರ್ತಿ ಕಂಬನಿ ಮಿಡಿದಿದ್ದಾರೆ.
HSLನ 75 ವರ್ಷಗಳ ಇತಿಹಾಸದಲ್ಲಿ ಸಂಭವಿಸಿದ ಮೊದಲ ಕ್ರೇನ್ ದುರಂತ
75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಶಾಖಪಟ್ಟಣದ ಹಿಂದೂಸ್ಥಾನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಕ್ರೇನ್ ಕುಸಿದ ದುರಂತ ಸಂಭವಿಸಿದೆ ಎಂದು ತೆಲುಗುನಾಡು ಟ್ರೇಡ್ ಯೂನಿಯನ್ ಕೌನ್ಸಿಲ್(TNTUC) ನಾಯಕ ರಮಣಮೂರ್ತಿ ತಿಳಿಸಿದ್ದಾರೆ.
75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು ಕ್ರೇನ್ ದುರಂತ!
ಹಿಂದೂಸ್ತಾನ್ ಶಿಪ್‌ಯಾರ್ಡ್ ಚರಿತ್ರೆಯಲ್ಲೇ ಪ್ರಾಣ ನಷ್ಟವಾಗುವಂತಹ ಘಟನೆ ಸಂಭವಿಸಿರಲಿಲ್ಲ. 75 ವರ್ಷದ ಇತಿಹಾಸದಲ್ಲೇ ಇದೇ ಮೊದಲು ಇಂತಹ ದುರ್ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ. 75 ಟನ್‌ಗಳ ಸಾಮರ್ಥ್ಯದ ದೊಡ್ಡ ಕ್ರೇನ್ ಲೋಡ್ ಪರೀಕ್ಷಿಸುತ್ತಿದ್ದಾಗ ಕುಸಿದುಬಿದ್ದಿದೆ ಎಂದು ಹೇಳಿದ್ದಾರೆ.