ಲಖನೌ: ದೇಶದಲ್ಲಿ ಲಾಕ್ಡೌನ್ ಹೇರಿಕೆ ಮಾಡಿರುವ ಕಾರಣ ಎಲ್ಲ ರಾಜ್ಯಗಳಲ್ಲೂ ನಿರುದ್ಯೋಗದ ಸಮಸ್ಯೆ ಉದ್ಭವವಾಗಿದ್ದು, ಜನರು ಕೆಲಸವಿಲ್ಲದೇ ತೊಂದರೆ ಅನುಭವಿಸ್ತಿದ್ದಾರೆ. ಇದೇ ವಿಷಯವಾಗಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವ ಸಿಎಂ ಯೋಗಿ ಆದಿತ್ಯನಾಥ್ ಮಹತ್ವದ ಸೂಚನೆ ನೀಡಿದ್ದಾರೆ.
15-20 ಲಕ್ಷ ಜನರಿಗೆ ಉದ್ಯೋಗದ ಯೋಜನೆ ರೂಪಿಸಿ: ಅಧಿಕಾರಿಗಳಿಗೆ ಯುಪಿ ಸಿಎಂ ಸೂಚನೆ! - ವಲಸೆ ಕಾರ್ಮಿಕರು
ವಿವಿಧ ರಾಜ್ಯಗಳಲ್ಲಿ ವಲಸೆ ಹೋಗಿದ್ದ ಕಾರ್ಮಿಕರು ಇದೀಗ ತವರುಗಳತ್ತ ಮುಖ ಮಾಡಿದ್ದು, ಲಾಕ್ಡೌನ್ ಮುಕ್ತಾಯಗೊಳ್ಳುತ್ತಿದ್ದಂತೆ ಅವರಿಗೆ ಕೆಲಸ ನೀಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.
ದೇಶದಲ್ಲಿ ಲಾಕ್ಡೌನ್ ಮುಕ್ತಾಯಗೊಳ್ಳುತ್ತಿದ್ದಂತೆ ಸುಮಾರು 15 - 20 ಲಕ್ಷ ಜನರಿಗೆ ಉದ್ಯೋಗ ಒದಗಿಸುವ ಯೋಜನೆ ರೂಪಿಸಿ ಎಂದು ಅವರು ಸೂಚನೆ ನೀಡಿದ್ದಾರೆ. ವಿವಿಧ ರಾಜ್ಯಗಳಿಗೆ ವಲಸೆ ಹೋಗಿದ್ದ ಕಾರ್ಮಿಕರು ಇದೀಗ ತವರು ರಾಜ್ಯಗಳತ್ತ ಮುಖ ಮಾಡಿರುವ ಕಾರಣ ಅವರಿಗೆ ಅಲ್ಲೇ ಉದ್ಯೋಗ ಒದಗಿಸುವ ಉದ್ದೇಶದಿಂದ ಯೋಜನೆ ರೂಪಿಸಿ ಎಂದಿದ್ದಾರೆ.
ಬೇರೆ ಬೇರೆ ರಾಜ್ಯಗಳಿಂದ ಉತ್ತರಪ್ರದೇಶಕ್ಕೆ ವಾಪಸ್ ಆಗುತ್ತಿರುವ ವಲಸೆ ಕಾರ್ಮಿಕರ ಹೆಸರು, ವಿಳಾಸ, ಮೊಬೈಲ್ ನಂಬರ್ ಹಾಗೂ ಅವರು ಮಾಡುವ ಕೆಲಸದ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಸೂಚನೆ ನೀಡಿದ್ದಾರೆ. ನೀವು ರೂಪಿಸುವ ಯೋಜನೆ 15-20 ಲಕ್ಷ ಜನರಿಗೆ ಉದ್ಯೋಗ ನೀಡುವಂತಹದ್ದು ಆಗಿರಬೇಕು ಎಂದಿರುವ ಅವರು, ದೇಶದಲ್ಲಿ ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡುವಂತೆ ಹೇಳಿದ್ದಾರೆ.