ಕರ್ನಾಟಕ

karnataka

ETV Bharat / bharat

ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ: ಮತದಾರರ ಬಸ್​ಗಳ​ ಮೇಲೆ ಗುಂಡಿನ ದಾಳಿ - ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ

ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆ ಮತದಾನಕ್ಕೆ ತೆರಳುತ್ತಿದ್ದ ಬಸ್​ ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಕೊಲಂಬೋದ ತಂತಿರಿಮಾಲೆ ಎಂಬಲ್ಲಿ ಈ ಘಟನೆ ನಡೆದಿದೆ. ಅಲ್ಪಸಂಖ್ಯಾತರನ್ನು ಕರೆದೊಯ್ಯಲಾಗುತ್ತಿದ್ದ ಬಸ್ ಇದಾಗಿತ್ತು.

ಮತಯಾಚನೆಗೆ ತೆರಳುವ ವೇಳೆ ಬಂದೂಕುದಾರಿಗಳು ದಾಳಿ

By

Published : Nov 16, 2019, 1:53 PM IST

ಕೊಲಂಬೋ: ಅಧ್ಯಕ್ಷೀಯ ಚುನಾವಣೆ ಹಿನ್ನೆಲೆ ಮತದಾನಕ್ಕೆ ಹೊರಟಿದ್ದ ಬಸ್​ಗಳ ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ವಾಯುವ್ಯ ಶ್ರೀಲಂಕಾದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಮತದಾರರನ್ನು ಕರೆದೊಯ್ಯುವ ಬಸ್‌ಗಳ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಮತಯಾಚನೆಗೆ ತೆರಳುವ ವೇಳೆ ಬಂದೂಕುಧಾರಿಗಳಿಂದ ದಾಳಿ

ದಾಳಿಕೋರರು ರಸ್ತೆಯಲ್ಲಿ ಟೈರ್​ಗಳನ್ನು ಸುಟ್ಟುಹಾಕಿದ್ದು, 100ಕ್ಕೂ ಹೆಚ್ಚು ವಾಹನಗಳನ್ನು ಗುರಿಯಾಗಿಸಿಕೊಂಡು ರಸ್ತೆ ತಡೆ ನಡೆಸಿದ್ದಾರೆ. ಇನ್ನು ಸಾವು, ನೋವುಗಳ ಬಗ್ಗೆ ಸ್ಪಷ್ಟ ಮಾಹಿತಿ ದೊರತಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೊಲಂಬೋದ ಉತ್ತರಕ್ಕೆ 240 ಕಿಲೋಮೀಟರ್ ದೂರದ ತಂತಿರಿಮಾಲೆ ಎಂಬಲ್ಲಿ ಈ ಘಟನೆ ನಡೆದಿದೆ.ಕರಾವಳಿ ಪಟ್ಟಣದ ಪುಟ್ಟಲಂನ ಮುಸ್ಲಿಂರು ನೆರೆಯ ಜಿಲ್ಲೆ ಮನ್ನಾರ್‌ಗೆ ಪ್ರಯಾಣಿಸುತ್ತಿದ್ದರು. ಅಲ್ಲಿ ಮತ ಚಲಾಯಿಸಲು ಹೊರಟಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸ್ ಪಡೆಗಳ ನೆರವಿನಿಂದ ರಸ್ತೆ ಅಡೆತಡೆಗಳನ್ನು ತೆರವುಗೊಳಿಸಿ, ಪ್ರಯಾಣಿಕರು ಮತ ಚಲಾಯಿಸಲು ಅನುಕೂಲ ಮಾಡಲಾಗಿದೆ.

ರಾಷ್ಟ್ರೀಯ ಚುನಾವಣೆಯ ಸಮಯದಲ್ಲಿ ರಸ್ತೆ ತಡೆ ಕಾನೂನು ಬಾಹಿರವೆಂದು ಸೇನೆಯ ಗಮನಕ್ಕೆ ತಂದ ಬಳಿಕ ಮತದಾರರಿಗೆ ಅವಕಾಶ ಕಲ್ಪಿಸಲಾಗಿದೆ. ಚುನಾವಣೆಗೆ ಯಾವುದೇ ಅಡ್ಡಿ ಉಂಟಾದರೆ ನ್ಯಾಯಾಲಯಗಳಿಗೆ ವರದಿ ಮಾಡಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶ್ರೀಲಂಕಾದ ಅಲ್ಪಸಂಖ್ಯಾತ ತಮಿಳರು ಮತ್ತು ಮುಸ್ಲಿಂರು ಎರಡು ಮುಂಚೂಣಿ ನಾಯಕರಾದ ವಸತಿ ಸಚಿವ ಸಾಜಿತ್ ಪ್ರೇಮದಾಸ ಮತ್ತು ಪ್ರತಿಪಕ್ಷದ ಗೋಟಬಯಾ ರಾಜಪಕ್ಷೆ ನಡುವಿನ ಸ್ಪರ್ಧೆಯಲ್ಲಿ ವಿಜೇತರನ್ನು ನಿರ್ಧರಿಸವ ನಿರ್ಣಾಯಕರಾಗಿದ್ದಾರೆ ಎನ್ನಲಾಗುತ್ತಿದೆ.

ABOUT THE AUTHOR

...view details