ಪೂರ್ಣಿಯಾ (ಬಿಹಾರ): ರಾಜ್ಯದಲ್ಲಿ ಮೂರನೇ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಧಮದಾ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮಸ್ಥರು, ಪೊಲೀಸರು ನಡುವೆ ಘರ್ಷಣೆ ನಡೆದಿದ್ದು, ಪರಿಸ್ಥಿತಿ ಕೈ ಮೀರಿದಾಗ ಸಿಐಎಸ್ಎಫ್ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಬಿಹಾರ ಎಲೆಕ್ಷನ್: ಒಂದೆಡೆ ಗಾಳಿಯಲ್ಲಿ ಗುಂಡು, ಮತ್ತೊಂದೆಡೆ ಲಾಠಿ ಚಾರ್ಜ್ - ಬಿಹಾರದ ಧಮದಾದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಪೊಲೀಸ್
ಬಿಹಾರದಲ್ಲಿ ಕೊನೆ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಹಲವೆಡೆ ಘರ್ಷಣೆ ಉಂಟಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಮತ್ತೊಂದೆಡೆ ಗುಂಪುಗೂಡಿದ್ದ ಜನರ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ.
ತ್ತೊಂದೆಡೆ ಲಾಠಿ ಚಾರ್ಜ್
ಘಟನೆ ಬಳಿಕ ಗ್ರಾಮಸ್ಥರು ನಾವು ಮತ ಚಲಾಯಿಸಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಧಮದಾ ನಗರದ ಬೂತ್ ನಂಬರ್ 282 ರಲ್ಲಿ ಘಟನೆ ನಡೆದಿದ್ದು, ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇನ್ನೂ ಹಿರಿಯ ಪೊಲೀಸ್ ಅಧಿಕಾರಿಗಲು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಕತಿಹಾರ್ನ ಫಾಲ್ಕಾದ ಬೂತ್ ನಂಬರ್ 86 ರ ಬಳಿ ಗುಂಪುಗೂಡಿದ್ದ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.