ಕರ್ನಾಟಕ

karnataka

ETV Bharat / bharat

ದೆಹಲಿ ಶಾಸ್ತ್ರಿ ಭವನದ ರೆಕಾರ್ಡ್​ ಕೋಣೆಯಲ್ಲಿ ಅಗ್ನಿ ಅವಘಡ - Delhi Shastri Bhavan

ದೆಹಲಿಯ ಶಾಸ್ತ್ರಿ ಭವನದ ರೆಕಾರ್ಡ್ ಕೋಣೆಯಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

Fire in the record room of Shastri Bhavan
ಶಾಸ್ತ್ರಿ ಭವನದ ರೆಕಾರ್ಡ್​ ಕೋಣೆಯಲ್ಲಿ ಅಗ್ನಿ ಅವಗಢ

By

Published : Jun 15, 2020, 12:17 PM IST

ನವದೆಹಲಿ: ಇಂದು ಬೆಳಗ್ಗೆ ದೆಹಲಿಯ ಶಾಸ್ತ್ರಿ ಭವನದ ಮೂರನೇ ಮಹಡಿಯ ರೆಕಾರ್ಡ್ ಕೋಣೆಯಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ.

ಶಾಸ್ತ್ರಿ ಭವನದ ರೆಕಾರ್ಡ್​ ಕೋಣೆಯಲ್ಲಿ ಅಗ್ನಿ ಅವಘಡ

ಸ್ಥಳಕ್ಕೆ ಎಂಟು ವಾಹನಗಳಲ್ಲಿ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಹೈಡ್ರಾಲಿಕ್ ಯಂತ್ರವನ್ನು ಬಳಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಕುರಿತು ವರದಿಯಾಗಿಲ್ಲ. ಆದರೆ, ರೆಕಾರ್ಡ್​ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಅಲ್ಲಿ ಯಾವ್ಯಾವ ದಾಖಲೆಗಳು ಸುಟ್ಟು ಹೋಗಿವೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details