ನವದೆಹಲಿ :ಪಶ್ಚಿಮ ದೆಹಲಿಯ ಮಾಯಾಪುರಿ ಪ್ರದೇಶದಲ್ಲಿರುವ ಮಾಸ್ಕ್ ತಯಾರಿಕಾ ಫ್ಯಾಕ್ಟರಿಯೊಂದರಲ್ಲಿ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಭಾರಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಓರ್ವ ಕಾರ್ಮಿಕ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಬೆಂಕಿ ನಂದಿಸಲು 6ಕ್ಕೂ ಹೆಚ್ಚು ಅಗ್ನಿಶಾಮಕ ವಾಹನ ಸ್ಥಳದಲ್ಲೇ ಬೀಡುಬಿಟ್ಟಿವೆ. ಘಟನೆಯಲ್ಲಿ 45 ವರ್ಷದ ನೌಕರ ಬೆಂಕಿಗಾಹುತಿಯಾಗಿದ್ದಾರೆ. ಕಾರ್ಖಾನೆಯ ಕಚ್ಚಾ ವಸ್ತುಗಳು ಮತ್ತು ಯಂತ್ರಗಳು ಬೆಂಕಿಗಾಹುತಿಯಾಗಿದ್ದು, ಅಪಾರ ಹಾನಿಯುಂಟಾಗಿದೆ.