ಮುಂಬೈ: ವಾಣಿಜ್ಯ ನಗರಿಯ ವಸತಿ ಕಟ್ಟಡವೊಂದರಲ್ಲಿ ಭಾನುವಾರ ಸಂಜೆ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ವಿಲೇ ಪಾರ್ಲೆ ಉಪನಗರದಲ್ಲಿ ಈ ದುರ್ಘಟನೆ ನಡೆದಿದೆ.
ಮುಂಬೈನ ಕಟ್ಟಡವೊಂದರಲ್ಲಿ ಅಗ್ನಿ ಅವಘಡ - ಮುಂಬೈ ಅಗ್ನಿ ಅವಘಡ ನ್ಯೂಸ್
ವಾಣಿಜ್ಯ ನಗರಿ ಮುಂಬೈನ ವಸತಿ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ವಿಲೇ ಪಾರ್ಲೆ ಉಪನಗರದಲ್ಲಿ ಈ ದುರ್ಘಟನೆ ನಡೆದಿದೆ.
![ಮುಂಬೈನ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಮುಂಬೈ ಕಟ್ಟಡವೊಂದರಲ್ಲಿ ಅಗ್ನಿ ಅವಗಡ](https://etvbharatimages.akamaized.net/etvbharat/prod-images/768-512-5462283-thumbnail-3x2-lek.jpg)
ಮುಂಬೈ ಕಟ್ಟಡವೊಂದರಲ್ಲಿ ಅಗ್ನಿ ಅವಗಡ
ಘಟನೆ ಕುರಿತು ಅಗ್ನಿಶಾಮಕ ಅಧಿಕಾರಿವೋರ್ವರು ಮಾಹಿತಿ ನೀಡಿದ್ದು, ವಿಲೇ ಪಾರ್ಲೆಯಲ್ಲಿರುವ ಲಾಭ್ ಶ್ರೀವಲ್ಲಿ ಕಟ್ಟಡದ ಏಳನೇ ಮತ್ತು ಎಂಟನೇ ಮಹಡಿಯಲ್ಲಿ ನಿನ್ನೆ ಸಂಜೆ 7: 10 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
ಇನ್ನು, ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸ್ಥಳಕ್ಕೆ ತೆರಳಿ, ಕೆಲವೇ ಗಂಟೆಗಳಲ್ಲಿ ಅದನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ತಿಳಿದುಬಂದಿದೆ.