ಅಹಮದಾಬಾದ್(ಗುಜರಾತ್): ನಗರದ ಸಿಟಿಎಂ ಪ್ರದೇಶದ ಇಂಡಿಯನ್ ಬ್ಯಾಂಕಿನ ಎಟಿಎಂನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಎಟಿಎಂ ಕೊಠಡಿ, ಯಂತ್ರ ಸಂಪೂರ್ಣ ಸುಟ್ಟು ಹೋಗಿರುವ ಘಟನೆ ನಡೆದಿದೆ.
ಎಟಿಎಂನಲ್ಲಿ ಹಠಾತ್ ಕಾಣಿಸಿಕೊಂಡ ಬೆಂಕಿ: ಸಂಪೂರ್ಣ ಸುಟ್ಟುಹೋದ ಎಟಿಎಂ - ಇಂಡಿಯನ್ ಬ್ಯಾಂಕಿನ ಎಟಿಎಂನಲ್ಲಿ ಭಾರೀ ಬೆಂಕಿ
ಬೆಳಗ್ಗೆ 9 ಗಂಟೆ ಸುಮಾರಿಗೆ ಎಟಿಎಂನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಎಟಿಎಂ ಕೊಠಡಿ ಹಾಗೂ ಎಟಿಎಂ ಯಂತ್ರ ಸಂಪೂರ್ಣ ಸುಟ್ಟುಹೋಗಿದೆ.
ಎಟಿಎಂನಲ್ಲಿ ಭಾರೀ ಬೆಂಕಿ
ಸಿಟಿಎಂ ಎಕ್ಸ್‌ಪ್ರೆಸ್ ಹೆದ್ದಾರಿಯ ಕರ್ಣಾವತಿ ಬಂಗಲೆಯ ಬಾಗಿಲಿನ ಬಳಿ ಇಂಡಿಯನ್ ಬ್ಯಾಂಕ್ ಇದೆ. ಅದರ ಹೊರಗಡೆ ಬ್ಯಾಂಕ್ ಎಟಿಎಂ ಕೂಡ ಇದೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಎಟಿಎಂನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಎಟಿಎಂ ಕೊಠಡಿ ಹಾಗೂ ಎಟಿಎಂ ಯಂತ್ರ ಸಂಪೂರ್ಣ ಸುಟ್ಟುಹೋಗಿದೆ.
ಆದರೆ, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸುವ ಮೊದಲೇ ಎಟಿಎಂ ಸಂಪೂರ್ಣ ಅಗ್ನಿಗಾಹುತಿ ಆಗಿದೆ. ಬಳಿಕ ಬೆಂಕಿ ನಂದಿಸುವ ಕಾರ್ಯಮಾಡಿದ್ದಾರೆ.