ಕರ್ನಾಟಕ

karnataka

ETV Bharat / bharat

ಹತ್ತು ಅಂತಸ್ತಿನ ಕಟ್ಟಡದಲ್ಲಿ ಭಾರಿ ಪ್ರಮಾಣದ ಬೆಂಕಿ, 15 ಕೋಟಿ ರೂ ಬಟ್ಟೆಗಳು ಭಸ್ಮ,250 ಕೋಟಿ ರೂ ನಷ್ಟ! - RAGHUVIR TEXTILE MARKET

ಗುಜರಾತ್‌ನ ಸೂರತ್‌ನಲ್ಲಿರುವ ಸರೋಲಿ ಪ್ರದೇಶದ ರಘುವೀರ್ ಜವಳಿ ಮಾರುಕಟ್ಟೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಅಂದಾಜು 250 ಕೋಟಿ ರೂಪಾಯಿ ನಷ್ಟವಾಗಿದ್ದು, 15 ಕೋಟಿ ರೂ ಮೌಲ್ಯದ ಬಟ್ಟೆಗಳು ಭಸ್ಮವಾಗಿವೆ ಎಂಬ ಮಾಹಿತಿ ದೊರತಿದೆ.

FIRE BREAKS OUT IN SURAT
ಹತ್ತು ಅಂತಸ್ತಿನ ಕಟ್ಟಡಕ್ಕೆ ಬೆಂಕಿ

By

Published : Jan 21, 2020, 8:00 AM IST

Updated : Jan 21, 2020, 12:23 PM IST

ಗುಜರಾತ್​​​: ಸೂರತ್‌ನ ಸರೋಲಿ ಪ್ರದೇಶದ ರಘುವೀರ್ ಜವಳಿ ಮಾರುಕಟ್ಟೆಯಲ್ಲಿ ಇಂದು ಮುಂಜಾನೆ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ.

10 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಬೆಂಕಿ ಇಡೀ ಕಟ್ಟಡವನ್ನು ಆವರಿಸಿಕೊಂಡಿದೆ.

ಹತ್ತು ಅಂತಸ್ತಿನ ಕಟ್ಟಡಕ್ಕೆ ಬೆಂಕಿ

ಘಟನಾ ಸ್ಥಳಕ್ಕೆ 50 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ದೌಡಾಯಿಸಿವೆ. ಕಟ್ಟಡದಲ್ಲಿ ಬೆಂಕಿ ಕಾಣಿಸಲು ಕಾರಣವೇನೆಂದು ಸದ್ಯ ತಿಳಿದುಬಂದಿಲ್ಲ.

ಕೆಲವು ದಿನಗಳ ಹಿಂದೆ ಮಾರುಕಟ್ಟೆ ಕಟ್ಟಡದ 4 ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

Last Updated : Jan 21, 2020, 12:23 PM IST

ABOUT THE AUTHOR

...view details