ನೋಯ್ಡಾ:ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 75ರಲ್ಲಿ ಅಪೆಕ್ಸ್ ಅಥೇನಾ ಸೊಸೈಟಿಯ ಬಹುಮಹಡಿ ಅಪಾರ್ಟ್‌ಮೆಂಟ್‌ನ 14ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ನೋಯ್ಡಾದ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ.. ಸರಿಯಾದ ಟೈಮ್‌ಗೆ ಕೈಕೊಟ್ಟ ಅಲಾರ್ಮ್ - massive fire broke out in an apartment in Noida
ಉತ್ತರ ಪ್ರದೇಶದ ನೋಯ್ಡಾದ ಅಪೆಕ್ಸ್ ಅಥೇನಾ ಸೊಸೈಟಿಯ ಬಹುಮಹಡಿ ಕಟ್ಚಡದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ.
ನೋಯ್ಡಾದ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ
ಫ್ಲ್ಯಾಟ್ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಪಾರ್ಟ್‌ಮೆಂಟ್‌ನೊಳಗೆ ಹೋಗಿ ನಾನು ಅಗ್ನಿ ಶಾಮಕ ಯಂತ್ರದಿಂದ ಬೆಂಕಿ ನಂದಿಸಲು ಮುಂದಾದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಫೈರ್ ಅಲಾರ್ಮ್ ಹಾಗೂ ವಾಟರ್ ಸ್ಪ್ರಿಂಕ್ಲರ್‌ಗಳು ಕೆಲಸ ಮಾಡಲಿಲ್ಲ ಎಂದು ಅಲ್ಲಿ ನಿಯೋಜನೆಗೊಂಡಿದ್ದ ಸೆಕ್ಯುರಿಟಿ ಗಾರ್ಡ್ ಆರೋಪಿಸಿದ್ದಾರೆ. ಘಟನೆಯಲ್ಲಿ ಓರ್ವ ವ್ಯಕ್ತಿಗೆ ಗಾಯಗಳಾಗಿದ್ದು, ಬೆಂಕಿ ಈಗ ನಿಯಂತಯ್ರಣಕ್ಕೆ ಬಂದಿರುವುದಾಗಿ ತಿಳಿದು ಬಂದಿದೆ.
TAGGED:
fire accident latest news