ಕರ್ನಾಟಕ

karnataka

ETV Bharat / bharat

ಪೆಟ್ರೋಲ್​ ಬಂಕ್​ಗೆ ಏಕಾಏಕಿ ಬೆಂಕಿ... ಬೆಂಕಿಗಾಹುತಿಯಾದ ಸಾವಿರಾರು ಲೀ. ಪೆಟ್ರೋಲ್​! - ಬಂಕ್​ನಲ್ಲಿ ಬ್ಲಾಸ್ಟ್

ಬಿಹಾರದ ಪಾಟ್ನಾದಲ್ಲಿನ ಪೆಟ್ರೋಲ್​ ಬಂಕ್​ವೊಂದಕ್ಕೆ ಏಕಾಏಕಿ ಬೆಂಕಿ ಹತ್ತಿಕೊಂಡು ದಗದಗನೇ ಹೊತ್ತಿ ಉರಿದಿರುವ ಘಟನೆ ನಡೆದಿದೆ.

ಪೆಟ್ರೋಲ್​ ಬಂಕ್​ಗೆ ಬೆಂಕಿ

By

Published : Oct 1, 2019, 8:16 PM IST

ಪಾಟ್ನಾ:ಪೆಟ್ರೋಲ್​ ಬಂಕ್​ಗೆ ಏಕಾಏಕಿ ಬೆಂಕಿ ಹತ್ತಿಕೊಂಡ ಪರಿಣಾಮ ದಗದಗನೇ ಹೊತ್ತಿ ಉರಿದಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸಾವಿರಾರು ಲೀಟರ್​​ ಪೆಟ್ರೋಲ್​​-ಡಿಸೇಲ್​ ಬೆಂಕಿಗೆ ಆಹುತಿಯಾಗಿದೆ.

ಪೆಟ್ರೋಲ್​ ಬಂಕ್​ಗೆ ಬೆಂಕಿ

ಕಳೆದ ಕೆಲ ದಿನಗಳಿಂದ ಬಿಹಾರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಇಲ್ಲಿನ ನಾಲಾ ರೋಡ್​​ನಲ್ಲಿರುವ ಪೆಟ್ರೋಲ್​ ಬಂಕ್ ಬಂದ್​​ ಆಗಿತ್ತು. ಆದರೆ ಇಂದು ಸಂಜೆ ಏಕಾಏಕಿಯಾಗಿ ಬೆಂಕಿ ಹತ್ತಿಕೊಂಡಿದೆ.

ಪೆಟ್ರೋಲ್​ ಬಂಕ್​ಗೆ ಬೆಂಕಿ

ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಬಂಕ್​ನಲ್ಲಿ ಬ್ಲಾಸ್ಟ್​ ಸಹ ಆಗಿದ್ದು, ಸಾವಿರಾರು ಲೀಟರ್​ ಪೆಟ್ರೋಲ್​-ಡಿಸೇಲ್​ ಬೆಂಕಿಗೆ ಆಹುತಿಯಾಗಿದೆ. ಘಟನೆ ನಡೆಯುತ್ತಿದ್ದಂತೆ ಅಕ್ಕಪಕ್ಕದ ಜನರು ಆಘಾತಕ್ಕೊಳಗಾದರು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಅಗ್ನಿ ಅವಘಡಕ್ಕೆ ಕಾರಣ ಏನು ಎಂಬುದು ಇಲ್ಲಿಯವರೆಗೂ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details