ಮುಂಬೈ:ಮಹಾರಾಷ್ಟ್ರದ ಗೋರೆಗಾಂವ್ ವೆಸ್ಟ್ನ ಸ್ಟುಡಿಯೋದಲ್ಲಿ ಇದ್ದಕ್ಕಿದ್ದ ಹಾಗೆ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುತ್ತಲೂ ಹೊಗೆ ಆವರಿಸಿದೆ. ಈ ಸ್ಟುಡಿಯೋ ನಗರದ ಇನೋರ್ಬಿಟ್ ಮಾಲ್ ಬಳಿ ಇದೆ.
ಎಂಟು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಲು ಸ್ಥಳಕ್ಕೆ ಆಗಮಿಸಿವೆ. ವರದಿಗಳ ಪ್ರಕಾರ, ಬೆಂಕಿ ಕಾಣಿಸಿಕೊಂಡಾಗ ಸ್ಟುಡಿಯೋ ಮುಚ್ಚಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹತ್ತಿಕೊಂಡಿರಬಹುದೆಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.