ನೋಯ್ಡಾ(ನವದೆಹಲಿ):ನೋಯ್ಡಾದ ಭಂಗಲ್ ಮಾರುಕಟ್ಟೆ ಬಳಿಯ ಕೊಳಗೇರಿಯಲ್ಲಿ ಶನಿವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದೆ.
ನೋಯ್ಡಾದ ಕೊಳಗೇರಿಯಲ್ಲಿ ಭಾರಿ ಅಗ್ನಿ ಅವಘಡ - ದೆಹಲಿ ಬೆಂಕಿ ಅವಘಡ ನ್ಯೂಸ್
ನವದೆಹಲಿಯ ನೋಯ್ಡಾದ ಭಂಗಲ್ ಮಾರುಕಟ್ಟೆ ಬಳಿಯ ಕೊಳಗೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಯಾವುದೇ ಸಾವು-ನೋವು ಅಥವಾ ಆಸ್ತಿಪಾಸ್ತಿ ನಷ್ಟವಾದ ಬಗ್ಗೆ ಮಾಹಿತಿ ಇಲ್ಲ.
![ನೋಯ್ಡಾದ ಕೊಳಗೇರಿಯಲ್ಲಿ ಭಾರಿ ಅಗ್ನಿ ಅವಘಡ Fire breaks at out near Noida's Bhangel Market](https://etvbharatimages.akamaized.net/etvbharat/prod-images/768-512-9302842-729-9302842-1603577220522.jpg)
ನೋಯ್ಡಾದ ಭಂಗಲ್ ಮಾರುಕಟ್ಟೆ ಬಳಿ ಬೆಂಕಿ ಅವಘಡ..
ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ಸದ್ಯ ಇದುವರೆಗೆ ಯಾವುದೇ ಸಾವುನೋವು ಅಥವಾ ಆಸ್ತಿಪಾಸ್ತಿ ನಷ್ಟವಾದ ಬಗ್ಗೆ ವರದಿಯಾಗಿಲ್ಲ.
ದೆಹಲಿಯ ಅಗ್ನಿಶಾಮಕ ದಳದ ಕನಿಷ್ಠ ಆರು ತಂಡಗಳು ಸೇರಿ ತಕ್ಷಣವೇ ಬೆಂಕಿ ಹರಡದಂತೆ ತಡೆಯುವಲ್ಲಿ ಶ್ರಮಿಸಿದ್ದಾರೆ. ಕಾರ್ಯಾಚರಣೆ ವೇಳೆಯೂ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.