ಪುಣೆ:ಮಹಾರಾಷ್ಟ್ರದ ಪುಣೆಯ ಕೊಂಡ್ವಾ ಪ್ರದೇಶದ ಗ್ಯಾರೇಜ್ವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕಾರುಗಳು ಸೇರಿದಂತೆ ಕನಿಷ್ಠ 10 ನಾಲ್ಕು ಚಕ್ರದ ವಾಹನಗಳು, ಇತರ ವಸ್ತುಗಳು ಸುಟ್ಟುಹೋಗಿವೆ.
ಪುಣೆಯ ಗ್ಯಾರೇಜ್ನಲ್ಲಿ ಅಗ್ನಿ ಅವಘಡ: ವಾಹನಗಳು ಸುಟ್ಟು ಭಸ್ಮ - Fire at garage in Pune
ಪುಣೆಯ ಗ್ಯಾರೇಜ್ವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕಾರುಗಳು ಸೇರಿದಂತೆ ಕನಿಷ್ಠ 10 ನಾಲ್ಕು ಚಕ್ರದ ವಾಹನಗಳು ಸುಟ್ಟುಹೋಗಿವೆ. ಸ್ಥಳಕ್ಕೆ 10 ವಾಹನಗಳಲ್ಲಿ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.
ಪುಣೆಯಲ್ಲಿ ಅಗ್ನಿ ಅವಘಡ
ಬುಧವಾರ ರಾತ್ರಿ ಘಟನೆ ನಡೆದಿದೆ. ಘಟನೆ ತಿಳಿದು ಸ್ಥಳಕ್ಕೆ 10 ವಾಹನಗಳಲ್ಲಿ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.
ಇದಕ್ಕೂ ಮೊದಲು ದಕ್ಷಿಣ ಮುಂಬೈನ ನಾರಿಮನ್ ಪಾಯಿಂಟ್ ಪ್ರದೇಶದಲ್ಲಿರುವ ಬ್ಯಾಂಕ್ ಆಫ್ ಬಹ್ರೇನ್ ಮತ್ತು ಕುವೈತ್ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಘಟನೆಯಲ್ಲಿ ದಾಖಲೆ ಪತ್ರಗಳು ಸೇರಿದಂತೆ ಹಲವು ವಸ್ತುಗಳು ಹಾನಿಗೊಳಗಾಗಿತ್ತು.