ಶ್ರೀಶೈಲಂ:ತೆಲಂಗಾಣದ ಶ್ರೀಶೈಲಂ ಅಣೆಕಟ್ಟೆಯ ಪವರ್‌ಹೌಸ್‌ನಲ್ಲಿ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ.
ಶ್ರೀಶೈಲಂ ವಿದ್ಯುತ್ ಸ್ಟೇಷನ್ನಲ್ಲಿ ಅಗ್ನಿ ಅವಘಡ - ಶ್ರೀಶೈಲಂ ವಿದ್ಯುತ್ ಸ್ಟೇಷನ್ನಲ್ಲಿ ಬೆಂಕಿ
ತಡರಾತ್ರಿ ಶ್ರೀಶೈಲಂ ವಿದ್ಯುತ್ ಸ್ಟೇಷನ್ನಲ್ಲಿ ಅಗ್ನಿ ಅವಘಡ ಸಂಭವಿಸಿ, 9 ಜನ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
![ಶ್ರೀಶೈಲಂ ವಿದ್ಯುತ್ ಸ್ಟೇಷನ್ನಲ್ಲಿ ಅಗ್ನಿ ಅವಘಡ ಶ್ರೀಶೈಲಂ ವಿದ್ಯುತ್ ಸ್ಟೇಷನ್ನಲ್ಲಿ ಅಗ್ನಿ ಅವಘಡ](https://etvbharatimages.akamaized.net/etvbharat/prod-images/768-512-8499034-thumbnail-3x2-tady2scopy.jpg)
ಶ್ರೀಶೈಲಂ ವಿದ್ಯುತ್ ಸ್ಟೇಷನ್ನಲ್ಲಿ ಅಗ್ನಿ ಅವಘಡ
ಅಣೆಕಟ್ಟೆಯ ಎಡದಂಡೆಯ ಪವರ್‌ಹೌಸ್‌ನಲ್ಲಿ ಶಾರ್ಟ್-ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ಎಚ್ಚೆತ್ತ ಅಧಿಕಾರಿಗಳು ಬೆಂಕಿ ನಂದಿಸುವ ಮೂಲಕ ದೊಡ್ಡ ಅವಘಡವನ್ನು ತಪ್ಪಿಸಿದ್ದಾರೆ.
ಶ್ರೀಶೈಲಂ ವಿದ್ಯುತ್ ಸ್ಟೇಷನ್ನಲ್ಲಿ ಅಗ್ನಿ ಅವಘಡ
ಶ್ರೀಶೈಲಂ ವಾಟರ್ ಪ್ರಾಜೆಕ್ಟ್ ವಿದ್ಯುತ್ ಕೇಂದ್ರದಲ್ಲಿ ಒಂಬತ್ತು ಸಿಬ್ಬಂದಿ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ. ನೌಕರರನ್ನು ಪವರ್‌ಹೌಸ್‌ನಿಂದ ಹೊರ ತರಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನಾಗಾರ್ಕರ್ನೂಲ್ ಜಿಲ್ಲಾಧಿಕಾರಿ, ಸಚಿವ ಜಗದೀಶ್ ರೆಡ್ಡಿ ಮತ್ತು ಇತರ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯ ಅವಲೋಕನೆ ನಡೆಸಲು ಸ್ಥಳಕ್ಕೆ ತೆರಳಿದ್ದಾರೆ.
Last Updated : Aug 21, 2020, 8:40 AM IST