ಕೃಷ್ಣಗಿರಿ (ತಮಿಳುನಾಡು):ಕೃಷ್ಣಗಿರಿ ಜಿಲ್ಲಾ ಕೇಂದ್ರದ ಹೆದ್ದಾರಿಯ ಟೋಲ್ ಗೇಟ್ನಿಂದ ತುಸು ದೂರದಲ್ಲಿದ್ದ ಶಶಿಕಲಾ ಬೆಂಬಲಿಗರ ಎರಡು ಕಾರುಗಳು ಬೆಂಕಿಗಾಹುತಿಯಾಗಿವೆ.
ಪಟಾಕಿ ತುಂಬಿದ್ದ ಚಿನ್ನಮ್ಮ ಬೆಂಬಲಿಗರ ಎರಡು ಕಾರುಗಳು ಬೆಂಕಿಗಾಹುತಿ! ತಮಿಳುನಾಡಿನ ರಾಜಕೀಯ ವಲಯದಲ್ಲಷ್ಟೇ ಅಲ್ಲ ಭಾವನಾತ್ಮಕ ವಲಯದಲ್ಲೂ ಸಂಚಲನ ಮೂಡಿಸಿರುವ ಚಿನ್ನಮ್ಮ ಶಶಿಕಲಾರ ಸ್ವಾಗತಕ್ಕೆ ನಿನ್ನೆಯಿಂದಲೇ ಸಿದ್ಧತೆ ನಡೆದಿತ್ತು.
ಓದಿ:ಅದ್ಧೂರಿ ಸ್ವಾಗತದೊಂದಿಗೆ ಕರ್ನಾಟಕ ಗಡಿ ದಾಟಿದ ತಮಿಳುನಾಡಿನ ಚಿನ್ನಮ್ಮ
ಚಿನ್ನಮ್ಮ ಸ್ವಾಗತಕ್ಕೆಂದು ಇಂದು ಅವರ ಬೆಂಬಲಿಗರು ಎರಡು ಕಾರಿನಲ್ಲಿ ಪಟಾಕಿ ತುಂಬಿಕೊಂಡು ಹೋಗುತ್ತಿದ್ದಾಗ ಕೃಷ್ಣಗಿರಿ ಟೋಲ್ ಗೇಟ್ ಬಳಿ ಎರಡು ಕಾರುಗಳಿಗೆ ಬೆಂಕಿ ತಗುಲಿ, ಈ ಅವಘಡ ಸಂಭವಿಸಿದೆ.