ಕರ್ನಾಟಕ

karnataka

ETV Bharat / bharat

ಶಾಲಾ ಆವರಣದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್; ವ್ಯಕ್ತಿ ಮೇಲೆ ಬಿತ್ತು ಕೇಸ್‌ - ಅನಂತಸಾಗರಂ ಪೊಲೀಸರಿಂದ ವಿಚಾರಣೆ

ಶಾಲಾ ಆವರಣದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿದ ಹೈದರಾಬಾದ್ ನಿವಾಸಿ ಮೇಲೆ ಆಂಧ್ರದ ನೆಲ್ಲೂರು ಬಳಿಯ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಾಗಿದೆ.

helicopter landing on school ground
ಶಾಲಾ ಆವರಣದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್

By

Published : Oct 30, 2020, 5:37 PM IST

ನೆಲ್ಲೂರು (ಆಂಧ್ರಪ್ರದೇಶ): ಸರ್ಕಾರಿ ಶಾಲೆಯ ಮೈದಾನದಲ್ಲಿ ಹೆಲಿಕಾಪ್ಟರ್​ ಅನ್ನು ಲ್ಯಾಂಡ್ ಮಾಡಿಸಿದ್ದ ಕಾರಣಕ್ಕಾಗಿ ಹೈದರಾಬಾದ್ ನಿವಾಸಿಯ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ನೆಲ್ಲೂರು ಬಳಿಯ ಅನಂತಸಾಗರಂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಹೈದರಾಬಾದ್ ನಿವಾಸಿಯಾದ ರಾಮಕೋಟೇಶ್ವರ ರಾವ್ ಎಂಬಾತ ತಮ್ಮ ಕುಟುಂಬದೊಂದಿಗೆ ಅನಂತಸಾಗರಂ ಮಂಡಲ್​ನ ರೇವೂರು ಗ್ರಾಮಕ್ಕೆ ಹೆಲಿಕಾಪ್ಟರ್ ಮೂಲಕ ಭೇಟಿ ನೀಡಿ, ಅಲ್ಲಿನ ಬೋಯ್ನಾ ಜನಾರ್ಧನ ರೆಡ್ಡಿ ಎಂಬಾತನ ಪುತ್ರಿಯ ವಿವಾಹದಲ್ಲಿ ಪಾಲ್ಗೊಂಡಿದ್ದನು.

ಅಕ್ಟೋಬರ್ 27ರ ಮಧ್ಯಾಹ್ನ 2.30ಕ್ಕೆ ಸರ್ಕಾರಿ ಶಾಲಾ ಆವರಣದಲ್ಲಿ ಹೆಲಿಕಾಪ್ಟರ್​ ಅನ್ನು ಲ್ಯಾಂಡ್ ಮಾಡಿದ್ದು, ವಿಷಯ ತಿಳಿದ ಅನಂತಪುರಂ ಎಂಆರ್​​ಒ ಹಾಗೂ ಆತ್ಮಕುರು ಆರ್​ಡಿಓ ವಿಚಾರಣೆ ನಡೆಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಎಫ್​ಐಆರ್ ದಾಖಲಾಗಿದೆ.

ಶಾಲಾ ಮೈದಾನದಲ್ಲಿ ಹೆಲಿಕಾಪ್ಟರ್​ ಲ್ಯಾಂಡಿಂಗ್ ಮಾಡಲು ಅನುಮತಿ ಕೊಟ್ಟವರಾರು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಶಾಲೆಯ ಮುಖ್ಯೋಪಾಧ್ಯಾಯರು ತಮಿಳುನಾಡಿನಲ್ಲಿದ್ದು, ಅವರು ಶುಕ್ರವಾರ ಬರುವ ಸಾಧ್ಯತೆಯಿದೆ. ಅವರು ಬಂದ ನಂತರ ವಿಚಾರಣೆ ನಡೆಸಲಾಗುತ್ತದೆ ಎಂದು ಅನಂತಸಾಗರಂ ಸಬ್ ಇನ್ಸ್​ಪೆಕ್ಟರ್ ಸ್ಪಷ್ಟನೆ ನೀಡಿದ್ದಾರೆ.

ABOUT THE AUTHOR

...view details