ದೆಹಲಿ: ಟಾಯ್ಲೆಟ್ ಮ್ಯಾಟ್ ಗಳ ಮೇಲೆ ಗೋಲ್ಡನ್ ಟೆಂಪಲ್ ಚಿತ್ರ ಬಳಸಿರುವ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಅಮೇಜಾನ್ ಕಂಪನಿ ವಿರುದ್ಧ ದೆಹಲಿ ಸಿಖ್ ಗುರುದ್ವಾರ ವ್ಯವಸ್ಥಾಪನಾ ಸಮಿತಿಮುಖ್ಯಸ್ಥ ಮಂಜಿಂದರ್ ಸಿಂಗ್ ಸಿರ್ಸಾ ದೂರು ದಾಖಲಿಸಿದ್ದಾರೆ.
ಟಾಯ್ಲೆಟ್ ಮ್ಯಾಟ್ಗಳ ಮೇಲೆ ಗೋಲ್ಡನ್ ಟೆಂಪಲ್ ಚಿತ್ರ: ಅಮೇಜಾನ್ ವಿರುದ್ಧ ದೂರು
ಟಾಯ್ಲೆಟ್ ಮ್ಯಾಟ್ ಗಳ ಮೇಲೆ ಗೋಲ್ಡನ್ ಟೆಂಪಲ್ ಚಿತ್ರ ಬಳಸಿರುವ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಅಮೇಜಾನ್ ಕಂಪನಿ ವಿರುದ್ಧ ದೆಹಲಿ ಸಿಖ್ ಗುರುದ್ವಾರ ವ್ಯವಸ್ಥಾಪನಾ ಸಮಿತಿ ಮುಖ್ಯಸ್ಥ ಮಂಜಿಂದರ್ ಸಿಂಗ್ ಸಿರ್ಸಾ ದೂರು ದಾಖಲಿಸಿದ್ದಾರೆ.
' ಅಮೆಜಾನ್ ವಿರುದ್ಧ ಎಫ್ಐಆರ್
ಸಿರ್ಸಾ ಅವರು ಈ ಕುರಿತಾದ ಕೆಲ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರ ಮೇಲೆ ಗೋಲ್ಡನ್ ಟೆಂಪಲ್‌ನ ಚಿತ್ರಗಳೊಂದಿಗೆ ಮುದ್ರಿಸಲಾದ ಟಾಯ್ಲೆಟ್ ಮ್ಯಾಟ್ಗಳ ಕೆಲ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ಇನ್ನು ಅಮೆಜಾನ್ ಸಂಸ್ಥೆಯು ಸಿಖ್ ಭಾವನೆಗಳ ಬಗ್ಗೆ ಕಿಂಚಿತ್ತು ಗೌರವವಿಲ್ಲದೇ ಅಜಾಗರೂಕತೆ ತೋರಿಸುತ್ತಿದೆ ಎಂದು ಸಿರ್ಸಾ ಟ್ವೀಟ್ ಮಾಡಿದ್ದಾರೆ. ಇ-ಕಾಮರ್ಸ್ನಲ್ಲಿ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಅಮೇಜಾನ್ ಅನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ ಅವರು ಜಾಗತಿಕವಾಗಿ ಕ್ಷಮೆಯಾಚಿಸುವಂತೆ ಹೇಳಿದರು.