ಬರ್ವಾನಿ (ಮಧ್ಯಪ್ರದೇಶ):ಪೊಲೀಸರು ಹಾಗೂ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಮೇಲೆ ದಾಳಿ ಮಾಡಿದ್ದ ಸುಮಾರು 400 ಅಪರಿಚಿತರ ಮೇಲೆ ಎಫ್ಐಆರ್ ದಾಖಲಿಸಿರುವ ಘಟನೆ ಬಿರ್ವಾನಿ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಬಿಜಸಾನ್ ಎಂಬ ರೆಡ್ ಝೋನ್ ಪ್ರದೇಶದಲ್ಲಿ ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶಕ್ಕೆ ಸೇರಿದ ಸುಮಾರು 7 ಸಾವಿರ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳಲು ಅನುಮತಿ ನೀಡುವಂತೆ ಆಗ್ರಹಿಸಿ ಆಗ್ರಾ - ಬಾಂಬೆ ರಸ್ತೆಯನ್ನು ಬಂದ್ ಮಾಡಿದ್ದರು. ಈ ವೇಳೆ, ಸ್ಥಳಕ್ಕೆ ಧಾವಿಸಿದ ಪೊಲೀಸರೊಂದಿಗೆ ವಾಗ್ವಾದ ನಡೆದು ವಾತಾವರಣ ಹದೆಗಟ್ಟಿತ್ತು.