ಮುಂಬೈ:ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ವಿರುದ್ಧದ ಹೇಳಿಕೆಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಮುಂಬೈನ ವಿಖ್ರೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಹೇಳಿಕೆ ಆರೋಪ: ಕಂಗನಾ ವಿರುದ್ಧ ದೂರು ದಾಖಲು - Kangana Ranaut
ಮಹಾರಾಷ್ಟ್ರ ಸಿಎಂ ವಿರುದ್ಧದ ಹೇಳಿಕೆಗಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಮುಂಬೈ ವಿಕ್ರೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಂಗನಾ ರಣಾವತ್
ಕಂಗನಾ ರಣಾವತ್ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಆ ವಿಡಿಯೋದಲ್ಲಿ ಉದ್ಧವ್ ಠಾಕ್ರೆ ನನ್ನ ಮನಗೆ ನುಗ್ಗಿದ್ದಾರೆ. ಅವರಿಗೆ ಅಹಂಕಾರವನ್ನು ಮುರಿಯುವುದಾಗಿ ಹೇಳಿಕೆ ನೀಡಿದ್ದರು.
ಅಕ್ರಮವಾಗಿ ನಿರ್ಮಿಸಿದ್ದಾರೆಂಬ ಆರೋಪದಲ್ಲಿ ಮುಂಬೈನ ಕಂಗನಾ ರಣಾವತ್ ಗೃಹಕಚೇರಿಯನ್ನು ಕೆಡವಲು ಬಿಎಂಸಿ( ಬೃಹನ್ಮುಂಬೈ ಮಹಾನಗರ ಪಾಲಿಕೆ) ಮುಂದಾಗಿತ್ತು. ಕಟ್ಟಡ ಕೆಡವಲು ಬಾಂಬೆ ಹೈಕೋರ್ಟ್ ತಡೆ ನೀಡಿತ್ತು.