ಚಿತ್ತೂರು (ಆಂಧ್ರಪ್ರದೇಶ):ಭೂ ವಿವಾದಕ್ಕಾಗಿ ನಡೆದ ಗಲಾಟೆ ತಾರಕಕ್ಕೇರಿ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಭೂ ವಿವಾದ; ಖಾರದಪುಡಿ ಎರಚಿ ಕಾದಾಟ.. ಮಹಿಳೆ ಸಾವು! - ಎರಡು ಕುಟುಂಬಗಳ ನಡುವೆ ಜಗಳ
ರಸ್ತೆ ವಿಚಾರವಾಗಿ ನಡೆದ ಜಗಳ ತಾರಕಕ್ಕೇರಿ, ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದಿದ್ದು, ಈ ವೇಳೆ ಮಹಿಳೆಯೋರ್ವಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ನಾರಾಯಣ ರೆಡ್ಡಿ ಹಾಗೂ ವಿಜಯ್ ಶೇಖರ್ ರೆಡ್ಡಿ ಕುಟುಂಬಗಳ ನಡುವೆ ಕಳೆದ ಅನೇಕ ವರ್ಷಗಳಿಂದ ಭೂಮಿ (ರಸ್ತೆ ಜಾಗ) ವಿಷಯವಾಗಿ ಜಗಳ ನಡೆಯುತ್ತಿತ್ತು. ಇಂದು ಬೆಳಗ್ಗೆ ಕೂಡ ಎರಡು ಕುಟುಂಬಗಳ ನಡುವೆ ಮತ್ತೆ ಜಗಳ ಶುರುವಾಗಿದೆ. ಈ ವೇಳೆ ನಾರಾಯಣ ರೆಡ್ಡಿ ಕುಟುಂಬಸ್ಥರು ವಿಜಯ್ ಶೇಖರ್ ರೆಡ್ಡಿ ಕುಟುಂಬಸ್ಥರ ಮೇಲೆ ದಾಳಿ ನಡೆಸಿದ್ದಾರೆ. ವಿಜಯ್ ಶಂಕರ್ ರೆಡ್ಡಿ ಕುಟುಂಬಸ್ಥರ ಮೇಲೆ ಖಾರದಪುಡಿ ಎರಚಿ ದಾಳಿ ನಡೆಸಲಾಗಿದೆ. ಇದು ತಾರಕ್ಕೇರುತ್ತಿದ್ದಂತೆ ಎರಡೂ ಕುಟುಂಬಸ್ಥರು ಹೊಡೆದಾಡಿದ್ದಾರೆ.
ಇದೇ ವೇಳೆ ನಾರಾಯಣ ರೆಡ್ಡಿ ಪತ್ನಿ ಚಂದ್ರಕಲಾ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದರಿಂದ ಆಕೆ ಸಾವನ್ನಪ್ಪಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಕೆಲವರನ್ನು ಬಂಧಿಸಿದ್ದಾರೆ.