ಕೊರೊನಾ ಸೋಂಕಿನ ವಿರುದ್ಧ ವಿಜಯದ ಪತಾಕೆ ಹಾರಿಸಲು ಅಥವಾ ಸಾಂಕ್ರಾಮಿಕ ರೋಗದ ವಿರುದ್ಧ ಉಗ್ರ ಹೋರಾಟ ನಡೆಸಲು ಮೇ ತಿಂಗಳು ನಮ್ಮ ಪಾಲಿಕೆ ಅತ್ಯಂತ ಸಂಕೀರ್ಣವಾದ ತಿಂಗಳಾಗಿದೆ ಎಂದು ವೈದ್ಯಕೀಯ ತಜ್ಞರು ಊಹಿಸುತ್ತಿದ್ದಾರೆ. ನೀತಿ ಆಯೋಗದ ಅಂಕಿ ಅಂಶಗಳ ಪ್ರಕಾರ, ಲಾಕ್‌ಡೌನ್ ತೆಗೆಯಲಾಗಿದೆ ಮತ್ತು ಮೇ15ರ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ 65 ಸಾವಿರ ಮತ್ತು ಅಗಸ್ಟ್ 15ರ ವೇಳೆಗೆ 2.7 ಕೋಟಿ ತಲುಪಬಹುದು. ಸಾಂಕ್ರಾಮಿಕ ರೋಗದಿಂದ ಜನರ ಜೀವನ ಮತ್ತು ಆರ್ಥಿಕತೆಗೆ ಆಗುತ್ತಿರುವ ಹಾನಿಯನ್ನು ಪರಿಗಣಿಸಿ,ಕೇಂದ್ರ ಸರ್ಕಾರವು ಕೋವಿಡ್-19 ದಾಳಿಯನ್ನು ತಡೆಯಲು ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿತು.
ಮೊದಲನೆಯದು ರಾಷ್ಟ್ರವ್ಯಾಪಿ ಲಾಕ್‌ಡೌನ್‌ನ ಮತ್ತೆರೆಡು ವಾರಗಳವರೆಗೆ ವಿಸ್ತರಿಸುವುದು ಮತ್ತು ಕೆಂಪು,ಕಿತ್ತಳೆ ಮತ್ತು ಹಸಿರು ವಲಯಗಳಿಗೆ ವಿವರವಾದ ಮಾರ್ಗಸೂಚಿಗಳನ್ನು ನೀಡುವುದು. ಎರಡನೆಯದು ವಿಶ್ರಾಂತಿಯಿಲ್ಲದ, ಸೂಕ್ತ ವ್ಯವಸ್ಥೆ ಹೊಂದಿರದ ವಲಸೆ ಕಾರ್ಮಿಕರನ್ನು ತಮ್ಮ ಸ್ಥಳಗಳಿಗೆ ವಾಪಸ್ ಕಳುಹಿಸುವ ಬೇಡಿಕೆಯನ್ನು ಪರಿಗಣಿಸಿ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡುವುದು. ಪ್ರಕರಣಗಳ ಸಂಖ್ಯೆ ಹೆಚ್ಚಿರುವ ವಲಯಗಳನ್ನು ಹೊರತುಪಡಿಸಿ, ಕೆಲವು ಷರತ್ತುಗಳೊಂದಿಗೆ ಉಳಿದ ವಲಯಗಳಲ್ಲಿ ಮಾರುಕಟ್ಟೆ ಮತ್ತು ವ್ಯಾಪಾರ ಸಂಸ್ಥೆಗಳಿಗೆ ಅನುಮತಿ ನೀಡುವುದು ರಾಜ್ಯ ಸರ್ಕಾರಗಳನ್ನು ಆರ್ಥಿಕವಾಗಿ ಬಿಕ್ಕಟ್ಟಿನಿಂದ ಸ್ವಲ್ಪ ಮುಕ್ತಗೊಳಿಸುತ್ತದೆ.
ಏಪ್ರಿಲ್ 15 ಮತ್ತು ಮೇ1 ರ ನಡುವೆ ಕೆಂಪು ವಲಯಗಳ ಸಂಖ್ಯೆ 170 ರಿಂದ 130ಕ್ಕೆ ಇಳಿದಿದೆ ಎಂಬುದು ಸಂತಸದ ಸುದ್ದಿಯಾಗಿದೆ. ಆದರೆ, ಕಿತ್ತಳೆ ವಲಯಗಳ ಹೆಚ್ಚಳ 284ಕ್ಕೆ ಮತ್ತು ಅದೇ ಅವಧಿಯಲ್ಲಿ ಹಸಿರು ವಲಯಗಳ ಸಂಖ್ಯೆಯಲ್ಲಿನ ಇಳಿಕೆ ಕೊರೊನಾ ಹರಡುವಿಕೆಯ ಸುಪ್ತ ಬೆದರಿಕೆಯನ್ನು ಸೂಚಿಸುತ್ತಿದೆ. ಹದಿನೈದು ದಿನದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ದಿನಕ್ಕೆ ಸರಾಸರಿ ಒಂದು ಸಾವಿರದಂತೆ ಏರುತ್ತಿದ್ದು, ಈಗ ಕಳೆದ ಕೆಲವು ದಿನಗಳಲ್ಲಿ ಈ ಪ್ರಮಾಣ ಎರಡು ಸಾವಿರವನ್ನು ಮೀರಿದೆ.
ಯುಎಸ್, ಇಟಲಿ ಮತ್ತು ಸ್ಪೇನ್‌ಗಳಂತೆ ಭಾರತದಲ್ಲಿ ಕೊರೊನಾ ಹರಡುವುದನ್ನು ತಡೆಯಲು ಲಾಕ್‌ಡೌನ್ ಪ್ರಮುಖ ಪಾತ್ರ ವಹಿಸಿದೆ. ಭಾರತವು ಇಂದು ದೇಶಾದ್ಯಂತ 419 ಲ್ಯಾಬ್‌ಗಳೊಂದಿಗೆ ದಿನಕ್ಕೆ 75,000 ಕೊರೊನಾ ಪರೀಕ್ಷೆಗಳ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಕೆಲವು ವಿನಾಯಿತಿಗಳೊಂದಿಗೆ ಭಾರತದ ಷರತ್ತುಬದ್ಧ ಲಾಕ್‌ಡೌನ್‌ನ ಸಡಿಲಿಕೆಯು ಪ್ರತಿಯೊಬ್ಬರೂ ತಮ್ಮನ್ನು ನಾಗರಿಕ ಜವಾಬ್ದಾರಿಯ ಪ್ರಜ್ಞೆಯೊಂದಿಗೆ ಸ್ವಯಂ ಪ್ರೇರಣೆಯಿಂದ ರಕ್ಷಿಸಿಕೊಳ್ಳಬೇಕು ಎಂಬ ಸರ್ಕಾರದ ಪ್ರಾಮಾಣಿಕ ಆಶಯವನ್ನು ಪ್ರತಿಬಿಂಬಿಸುತ್ತದೆ.