ಉದಯಪುರ್(ರಾಜಸ್ಥಾನ):ನಿಶ್ಚಿತಾರ್ಥ ಮಾಡಿಕೊಂಡ ಬಳಿಕವೂ ಲವರ್ ಭೇಟಿ ಮಾಡಲು ತೆರಳಿದ್ದ ಯುವಕನೋರ್ವನನ್ನು ಆತನ ಭಾವಿ ಪತ್ನಿ ನಡುರಸ್ತೆಯಲ್ಲೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.
ನಿಶ್ಚಿತಾರ್ಥದ ಬಳಿಕವೂ ಲವರ್ ಭೇಟಿಗೆ ತೆರಳಿದ ಯುವಕ, ಭಾವಿ ಪತ್ನಿಯಿಂದ ಥಳಿತ: ವಿಡಿಯೋ - ನಿಶ್ಚಿತಾರ್ಥ ಯುವತಿ
ನಿಶ್ಚಿತಾರ್ಥ ಮಾಡಿಕೊಂಡಿದ್ದರೂ ಲವರ್ ಜತೆ ತೆರಳಿದ್ದ ಯುವಕನೋರ್ವನಿಗೆ ಮಹಿಳೆ ಸರಿಯಾಗಿ ಬುದ್ದಿ ಕಲಿಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ರಿಷಭ್ದೇವ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಯುವಕನೋರ್ವ ಬೇರೆ ಯುವತಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಇದಾದ ಬಳಿಕ ಇಬ್ಬರ ನಡುವೆ ಜಗಳವೂ ನಡೆದಿತ್ತು. ಇದರ ಮಧ್ಯೆ ಯುವಕ ತನ್ನ ಪ್ರೇಯಸಿ ಜತೆ ಬೈಕ್ ಮೇಲೆ ತೆರಳಿದ್ದು, ರೆಡ್ಹ್ಯಾಂಡ್ ಆಗಿ ನಿಶ್ಚಿತಾರ್ಥ ಮಾಡಿಕೊಂಡ ಯುವತಿ ಕೈಗೆ ಸಿಕ್ಕಿಬಿದ್ದಿದ್ದಾರೆ.
ಈ ವೇಳೆ ಆತನಿಗೆ ಯುವತಿ ಕಪಾಳಮೋಕ್ಷ ಮಾಡಿದ್ದಾಳೆ. ರಸ್ತೆಯಲ್ಲಿ ನಡೆದ ಹೈಡ್ರಾಮಾ ನೋಡಲು ಅನೇಕರು ಜಮಾಯಿಸಿದರು. ಈ ವೇಳೆ ನಿಶ್ಚಿತಾರ್ಥ ಮಾಡಿಕೊಂಡಿರುವ ಯುವತಿಯನ್ನು ಬಿಟ್ಟು ಬಿಡುವುದಾಗಿ ಆತ ಹೇಳಿದ್ದಾನೆ. ಆದರೆ ಸ್ಥಳೀಯರು ಆತನ ಮನವೊಲಿಸಿದ್ದಾರೆ. ಇದಾದ ಬಳಿಕ ಆತ ಪ್ರಿಯತಮೆಯನ್ನು ಸ್ಥಳದಲ್ಲೇ ಬಿಟ್ಟು ನಿಶ್ಚಿತಾರ್ಥ ಮಾಡಿಕೊಂಡ ಮಹಿಳೆ ಜತೆ ಹೋಗಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.