ಕರ್ನಾಟಕ

karnataka

ETV Bharat / bharat

ಚಳಿಗಾಲದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಬಹುದು: ಸಚಿವ ಸತ್ಯೇಂದ್ರ ಜೈನ್ - ಕೊರೊನಾ ನ್ಯೂಸ್​ ದೆಹಲಿ

ಹಬ್ಬಗಳು ಮತ್ತು ಚಳಿಗಾಲ ಕೊರೊನಾ ವೈರಸ್​ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ತಜ್ಞರ ಸಮಿತಿಯ ವರದಿ ನೀಡಿದೆ..

satyendra
ಸಚಿವ ಸತ್ಯೇಂದ್ರ ಜೈನ್

By

Published : Oct 25, 2020, 5:56 PM IST

ನವದೆಹಲಿ: ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಕೊರೊನಾ ಪ್ರಕರಣಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದ್ದು, ನಾಲ್ಕು ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣ ನಿರಂತರವಾಗಿ ವರದಿಯಾಗುತ್ತಿದ್ದರೆ, ಸೋಂಕಿನ ಪ್ರಮಾಣವು ಕಳೆದ ಒಂದೂವರೆ ತಿಂಗಳಿನಿಂದ 5 ಮತ್ತು ಒಂದೂವರೆ ಪ್ರತಿಶತದಷ್ಟಿದೆ. ಈಗ 7 ಮತ್ತು ಒಂದೂವರೆ ಪ್ರತಿಶತವನ್ನು ತಲುಪುತ್ತಿದೆ. ದೆಹಲಿಯಲ್ಲಿ ಒಟ್ಟು ಕೊರೊನಾ ಪ್ರಕರಣ ಮೂರೂವರೆ ಲಕ್ಷ ದಾಟಿದ್ದು, ಈ ಪೈಕಿ 50 ಸಾವಿರ ಪ್ರಕರಣ ಕಳೆದ 15 ದಿನಗಳಲ್ಲಿ ಕಂಡು ಬಂದಿವೆ.

ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್

ದಿನಕ್ಕೆ 15,000 ಪ್ರಕರಣ :ಈ ಬಗ್ಗೆ ದೆಹಲಿಯ ಆರೋಗ್ಯ ಸಚಿವರನ್ನು ಪ್ರಶ್ನಿಸಿದಾಗ, ಚಳಿಗಾಲ ಮತ್ತು ಹಬ್ಬದ ಸಮಯದಲ್ಲಿ ರಾಜಧಾನಿಯಲ್ಲಿ ಪ್ರತಿದಿನ 12-14 ಸಾವಿರ ಹೊಸ ಕೋವಿಡ್ ಪ್ರಕರಣ ವರದಿಯಾಗಬಹುದೆಂದು ವಿ.ಕೆ.ಪಾಲ್ ಅವರ ತಜ್ಞರ ಸಮಿತಿ ಆತಂಕ ವ್ಯಕ್ತಪಡಿಸಿದೆ ಎಂದು ಸಚಿವ ಜೈನ್ ಹೇಳಿದರು. ಪ್ರತಿದಿನ 15 ಸಾವಿರ ಪ್ರಕರಣಗಳಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಡಾ. ಪಾಲ್ಸ್ ಸಮಿತಿ ಹೇಳಿದೆ ಎಂದು ಆರೋಗ್ಯ ಸಚಿವರು ಹೇಳಿದರು.

ಸೋಂಕಿತರ ಸಂಪರ್ಕಕ್ಕೆ ಬಂದವರ ಪತ್ತೆ ಹಚ್ಚುವಿಕೆ :ಹಬ್ಬದ ಸಮಯದಲ್ಲಿ ಬರುವ ಜನಸಂದಣಿಯು ಕೊರೊನಾ ಹೆಚ್ಚಳಕ್ಕೆ ಕಾರಣವೇ ಎನ್ನುವುದರ ಬಗ್ಗೆ, ಸತ್ಯೇಂದ್ರ ಜೈನ್ ಅವರು ತಜ್ಞರ ಸಮಿತಿಯು ಚಳಿಗಾಲದ ಜೊತೆಗೆ ಒಂದು ಕಾರಣವನ್ನು ನೀಡಿದೆ ಎಂದು ಹೇಳಿದರು. ಇನ್ನು ದೆಹಲಿಯ ಸಿದ್ಧತೆಗಳ ಬಗ್ಗೆ ಸಚಿವರು, ನಾವು ಕೊರೊನಾ ನಿಯಂತ್ರಣವನ್ನು ಕೇಂದ್ರೀಕರಿಸಿದ್ದೇವೆ. ಯಾರಿಗಾದರೂ ಪಾಸಿಟಿವ್​ ಬಂದರೂ, ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಹೇಳಿದರು.

ಸಾಮೂಹಿಕ ಪರೀಕ್ಷೆಯಲ್ಲಿ ಪಾಸಿಟಿವ್​ ಪ್ರಕರಣ :ಹೆಚ್ಚುತ್ತಿರುವ ಸೋಂಕಿನ ಪ್ರಮಾಣಕ್ಕೆ ಸಂಬಂಧಿಸಿದಂತೆ, ಸತ್ಯೇಂದ್ರ ಜೈನ್ ಅವರು ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ನಡುವೆ ಒಟ್ಟಿಗೆ ವಾಸಿಸುತ್ತಿದ್ದಾರೆ. ಅವರಲ್ಲಿ ಯಾರಿಗಾದರೂ ಕೊರೊನಾ ಪಾಸಿಟಿವ್​ ಬಂದರೆ, ನಾವು ಎಲ್ಲವನ್ನೂ ಸಂಪರ್ಕಿಸುವ ಮೂಲಕ ಪರೀಕ್ಷಿಸುತ್ತಿದ್ದೇವೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಕಂಡು ಬರುತ್ತಿದ್ದಾರೆ. ಈ ಕಾರಣಕ್ಕಾಗಿ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ ಎಂದು ಅವರು ಹೇಳಿದರು.

ಕ್ಷಿಪ್ರಗತಿಯಲ್ಲಿ ಕೊರೊನಾ ಹರಡುವಿಕೆಗೆ ಸಂಬಂಧಿಸಿದಂತೆ ಜನರ ಅಸಡ್ಡೆ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, ಕೊರೊನಾದಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಏಕೈಕ ಮಾರ್ಗವೆಂದರೆ ಮಾಸ್ಕ್​ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದರು. ಇನ್ನು ಈ ಸಾಂಕ್ರಾಮಿಕ ರೋಗದಿಂದಾಗಿ ದೆಹಲಿಯಲ್ಲಿ ಶಾಲೆಗಳು ಶೀಘ್ರದಲ್ಲೇ ತೆರೆಯುವುದಿಲ್ಲ ಎಂದು ತಿಳಿಸಿದರು.

ABOUT THE AUTHOR

...view details